ಸಮಾಜದಲ್ಲಿ ನಡೆಯುವ ವಿವಿಧ ಘಟನೆಗಳು, ಲೇಖನಗಳು, ವೈವಿಧ್ಯಮಯ ವರದಿಗಾರಿಕೆ ಮೂಲಕ ಕನ್ನಡ ನಾಡು ಸಹಿತ ಎಲ್ಲೆಡೆ ಮನೆಮಾತಾಗಿರುವ ವಿಶ್ವ ಕನ್ನಡಿಗ ನ್ಯೂಸ್ ಯಶಸ್ವೀ ಹದಿಮೂರು ವರ್ಷಗಳನ್ನು ಪೂರೈಸಿ ಹದಿನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಎಲ್ಲರಿಗೂ ಅವಕಾಶ ನೀಡುವ, ಬರಹ, ವರದಿಗಳಿಗೆ ಪ್ರೋತ್ಸಾಹ ನೀಡುವ ವಿಶಾಲ ಮನೋಭಾವ ವಿಶ್ವ ಕನ್ನಡಿಗ ನ್ಯೂಸ್ ನ್ನು ಇಷ್ಟು ಎತ್ತರಕ್ಕೇರಿಸಿದೆ ಎನ್ನಲು ಹೆಮ್ಮೆಯೆನಿಸುತ್ತಿದೆ.
ಜಗತ್ತಿನ ವಿವಿಧ ಕಡೆಗಳಲ್ಲಿ ಹರಡಿಕೊಂಡಿರುವ ಲಕ್ಷಾಂತರ ಕನ್ನಡಿಗರ ಪಾಲಿನ ನೆಚ್ಚಿನ ವರದಿ ತಾಣವಾಗಿ ಪ್ರಾಮಾಣಿಕತೆ ಮತ್ತು ನಿಖರ ಸುದ್ದಿಗಳನ್ನು ಜನರಿಗೆ ತಲುಪಿಸಿ ಮಾಧ್ಯಮ ಕ್ಷೇತ್ರದ ತನ್ನತನವನ್ನು ಉಳಿಸಿಕೊಂಡಿರುವ ವಿಕೆ ನ್ಯೂಸ್ ಹಲವರ ಸಮಸ್ಯೆಗಳಿಗೆ ಕೂಡ ಧ್ವನಿಯಾಗಿದೆ.
ಮುಂದಿನ ಪ್ರತಿಯೊಂದು ನಿಮಿಷಗಳು ವಿಶ್ವ ಕನ್ನಡಿಗ ನ್ಯೂಸ್ ನ ಯಶಸ್ಸಿನ ನಿಮಿಷಗಳಾಗಲಿ. ನಾಡಿನ ಸಮಾನತೆ ಮತ್ತು ಏಕತೆಯ ಸಂದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಕ್ರಾಂತಿಕಾರಿ ಹೆಜ್ಜೆಗಳನ್ನಿಡಲಿ.
ಡಾ| ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದ.ಕ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.