ಇಂಡೋನೇಷ್ಯಾ (www.vknews.in) : ಮದುವೆಯಾಗಿ ಒಂದು ವಾರ ಕಳೆಯುವುದರ ಮುನ್ನವೇ ವೈದ್ಯ ದಂಪತಿ ಇಹಲೋಕ ತ್ಯಜಿಸಿದ್ದಾರೆ. ಜೂನ್ 1 ರಂದು ಇಬ್ಬರೂ ಮದುವೆಯಾಗಿದ್ದು, ಹನಿಮೂನ್ಗಾಗಿ ಇಂಡೋನೇಷ್ಯಾದ ಬಾಲಿಗೆ ತೆರಳಿದ್ದರು. ವೈದ್ಯ ದಂಪತಿ ಸ್ಪೀಡ್ ಬೋಟ್ ರೈಡ್ ಸಮಯದಲ್ಲಿ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲು ಸಮುದ್ರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
ವೈದ್ಯ ದಂಪತಿಯಾದ ಲೋಕೇಶ್ವರನ್ ಮತ್ತು ವಿಭೂಶಾನಿಯಾ ಮೃತಪಟ್ಟವರು. ಜೂನ್ 1 ರಂದು ಪೂನಮಲ್ಲಿಯ ಮದುವೆ ಮಂಟಪದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೋಟೋಶೂಟ್ ವೇಳೆ ನೀರಿನಲ್ಲಿ ಮುಳುಗಿ ದಂಪತಿ ಸಾವನ್ನಪ್ಪಿರುವ ಬಗ್ಗೆ ಇಬ್ಬರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರ ಸಾವಿನ ಮಾಹಿತಿ ತಿಳಿದು ಬಂದ ತಕ್ಷಣವೇ ಎರಡು ಕುಟುಂಬಗಳು ಬಾಲಿ ತಲುಪಿದವು. ಶುಕ್ರವಾರ ಲೋಕೇಶ್ವರನ್ ಮೃತದೇಹ ಹಾಗೂ ಶನಿವಾರ ಬೆಳಗ್ಗೆ ವಿಭೂಷಣಿಯ ಮೃತದೇಹ ಪತ್ತೆಯಾಗಿದೆ. ಇದೀಗ ಇಬ್ಬರ ಮೃತದೇಹಗಳನ್ನು ಭಾರತಕ್ಕೆ ತರಲು ಸಿದ್ಧತೆ ನಡೆಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.