ಬಳ್ಳಾರಿ (www.vknews.in) : ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಚಾಲನೆ ನೀಡುವ ವೇಳೆ ಬಸ್ ಮೇಲೆ ಇದ್ದ ಬಿಜೆಪಿ ಸ್ಟಿಕ್ಕರ್ ನೋಡಿ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಕೋಪಗೊಂಡ ಘಟನೆ ನಡೆದಿದೆ.
ಶಕ್ತಿ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಒಂದು ಬಸ್ ಮೇಲೆ ಬಿಜೆಪಿ ಸ್ಟಿಕ್ಕರ್ ಕಂಡು ನಾಗೇಂದ್ರ ಅವರು ಕೋಪಗೊಂಡು ಯೋಜನೆಗೆ ಚಾಲನೆ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ಕೆಲ ಕಾಲ ಗೊಂದಲದ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭ ರಾಜಕೀಯ ರ್ಯಾಲಿಗಳಿಗೆ ಬಸ್ ಗಳನ್ನು ಬಳಕೆ ಮಾಡಲಾಗಿದ್ದು, ರ್ಯಾಲಿ ವೇಳೆ ಬಿಜೆಪಿ ಪೋಸ್ಟರ್ ಗಳನ್ನು ಬಸ್ ಗಳ ಮೇಲೆ ಅಂಟಿಸಲಾಗಿತ್ತು. ಅದನ್ನು ತೆಗೆಯದೆ ಶಕ್ತಿ ಯೋಜನೆಗೆ ತಂದು ಅಧಿಕಾರಿಗಳು ಎಡವಟ್ಟು ಮಾಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.