ನವದೆಹಲಿ (www.vknews.in) : ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಟ್ಯೂಷನ್’ಗೆ ತೆರಳುತ್ತಿದ್ದ 10ನೇ ತರಗತಿ ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. 15 ವರ್ಷದ ಬಾಲಕನ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಲಾಗಿದೆ.
ಬಾಲಕನನ್ನು ಆಂಬ್ಯುಲೆನ್ಸ್’ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ, ಬಾಲಕ ‘ವೆಂಕಿ’ ಅನ್ನೋ ಹೆಸರನ್ನ ಹೇಳುತ್ತಲೇ ಇದ್ದ. ಇನ್ನು ಅಮರನಾಥ್ ಎಂಬ ವಿದ್ಯಾರ್ಥಿ ಇತರ ಮೂವರ ಹೆಸರನ್ನೂ ಹೇಳಿದ್ದಾನೆ. ಇನ್ನು ಈ ಬಾಲಕ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾನೆ. 21 ವರ್ಷದ ವೆಂಕಟೇಶ್ವರ್ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿಯ ಕುಟುಂಬ ಆರೋಪಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.