ಮಂಗಳೂರು (www.vknews.in) ; ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿದ್ಯಾರ್ಥಿ ಬಸ್ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಜೂ.12ರಿಂದ ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವೂ 30ರೂ. ಸೇವಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.
ಕರಾರಸಾ ನಿಗಮ ವ್ಯಾಪ್ತಿಯ 129 ಪಾಸ್ ವಿತರಣಾ ಕೌಂಟರ್ಗಳ ವಿವರವನ್ನು ನಿಗಮದ ವೆಬ್ಸೈಟ್ https://ksrtc.karnataka.gov.in/studentpass ನಲ್ಲಿ ಪಡೆಯಬಹುದು. ವಿದ್ಯಾರ್ಥಿ ಪಾಸುಗಳಿಗೆ ಅರ್ಜಿ ಸಲ್ಲಿಕೆ, ಮುದ್ರಣ ಸಂಬಂಧ ದೂರುಗಳಿದ್ದಲ್ಲಿ ಸಹಾಯವಾಣಿಯನ್ನು ಸಂಪಕಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿತ ವಿಷಯಗಳಿಗೆ ಮೊ.ಸಂಖ್ಯೆ: 8792662814, 8792662816 ಇ-ಮೇಲ್: [email protected] ಸಂಪರ್ಕಿಸಬಹುದು.
ಪಾಸ್ ವಿತರಣಾ ಮುದ್ರಣ ಸಂಬಂಧಿತ ವಿಷಯಗಳಿಗೆ ಮೊ.ಸಂಖ್ಯೆ: 8904085030, ಇ-ಮೇಲ್: [email protected] ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಕರಾರಸಾ ನಿಗಮದ ಕಾಲ್ಸೆಂಟರ್ ಸಂಖ್ಯೆ: 080-26252625, ಇ-ಮೇಲ್: [email protected] ಅನ್ನು ಸಂಪರ್ಕಿಸಬಹುದು ಎಂದು ಕ.ರಾ.ರ.ಸಾ. ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.