ಶಿವಮೊಗ್ಗ (www.vknews.in) : ವಿದ್ಯಾರ್ಥಿನಿಯ ನಗ್ನಚಿತ್ರವನ್ನು ವಿಡಿಯೋ ಮಾಡಿ ಬ್ಲಾಕ್’ಮೇಲ್ ಮಾಡುತ್ತಿದ್ದ ಎಬಿವಿಪಿಯ ತಾಲೂಕು ಅಧ್ಯಕ್ಷನನ್ನು ಬಂಧಿಸಬೇಕೆಂದು ಎನ್ಎಸ್ ಯು ಐ ಆಗ್ರಹಿಸಿದೆ. ತೀರ್ಥಹಳ್ಳಿಯ ಎಬಿವಿಪಿ ತಾಲೂಕು ಅಧ್ಯಕ್ಷ ಪ್ರತಿಗೌಡ ಎಂಬಾತ ವಿದ್ಯಾರ್ಥಿನಿಯ ಅಶ್ಲೀಲ ಚಿತ್ರವನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಆರೋಪಿಯಾಗಿದ್ದಾನೆ.
ಈತ ಎಬಿವಿಪಿಯಲ್ಲಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ, ಆಕೆಯನ್ನು ನಗ್ನಳಾಗುವಂತೆ ಒತ್ತಾಯಿಸಿದ್ದಾನೆ. ಆ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಆ ವಿಡಿಯೋ ಇಟ್ಟುಕೊಂಡು ಆಕೆಯನ್ನು ಬ್ಲಾಕ್’ಮೇಲ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ, ಜೂನ್ 16ರಂದು ಆ ವಿಡಿಯೋವನ್ನು ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಆರೋಪಿ ಪ್ರತಿಗೌಡನನ್ನು ಬಂಧಿಸುವಂತೆ ಎನ್ಎಸ್ ಯು ಐ ಸಂಘಟನೆ ಒತ್ತಾಯಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.