ಸವಣೂರು (www.vknews.in) : ಸಯ್ಯಿದ್ ಮುಹಮ್ಮದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್ ಚಾಪಲ್ಲ ಸವಣೂರು ಇದರ ಸಂಘಟನೆಯಾದ ಮಕಾಶಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಜೂನ್ 18 ತಂದೆಯಂದಿರ ದಿನದ ಭಾಗವಾಗಿ “ತಂದೆಗಾಗಿ ಒಂದು ನಿಮಿಷ” ಕಾರ್ಯಕ್ರಮ ಜೂನ್ 18 ರಂದು ಅಸರ್ ನಮಾಝಿನ ಬಳಿಕ ದರ್ಸ್ ಹಾಲಿನಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಎಲ್ಲಾ ವಿಧ್ಯಾರ್ಥಿಗಳು ತಮ್ಮ ತಂದೆಯಂದಿರ ಕಷ್ಟ-ಸುಖಗಳನ್ನು ಹಂಚಿಕೊಂಡರು. ‘ದರ್ಸಿನಲ್ಲಿ ಕಲಿಯುತ್ತಿರುವ ಅನಾಥ ವಿಧ್ಯಾರ್ಥಿಗಳು ಅವರ ತಂದೆಯಂದಿರ ಜೀವಂತ ಕಾಲದ ಕಷ್ಟ ಮರಣ ನಂತರದ ಅವರ ನಷ್ಟ ಇವೆಲ್ಲವನ್ನೂ ಕಣ್ಣೀರಿನೊಂದಿಗೆ ವಿವರಿಸುವಾಗ ಆ ಕಾರ್ಯಕ್ರಮದಲ್ಲಿ ಸಂಗಮಿಸಿದವರೆಲ್ಲರೂ ಕಣ್ಣೀರಿನೊಂದಿಗೆ ಒಂದೊತ್ತು ನಿಶಬ್ದರಾದರು’.
ಕಾರ್ಯಕ್ರಮದಲ್ಲಿ ಚಾಪಲ್ಲ ಮುದರ್ರಿಸ್ ಬಹು| ಉಸ್ತಾದ್ ಅಶ್ರಫ್ ಬಾಖವಿ ತಂದೆಯಂದಿರ ಮಹತ್ವದ ಕುರಿತು ಸಂದೇಶ ನೀಡಿ ಮರಣ ಹೊಂದಿದವರ ಪಾರತ್ರಿಕ ವಿಜಯಕ್ಕೂ ಎಲ್ಲಾ ತಂದೆಯಂದಿರ ಆಫಿಯತ್ ಗಾಗಿ ಪ್ರತ್ಯೇಕ ದುಆ ನಡೆಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ದರ್ಸ್ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಹನೀಫ್ ಸವಣೂರು ಕಾರ್ಯಕ್ರಮವನ್ನು ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.