ಬೆಳಗಾವಿ (www.vknews.in) : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಬೆಳಗಾವಿಯ ಅಂಬೇಡ್ಕರ್ ನಗರದ ನಿವಾಸಿಯಾದ ರಮೇಶ್ ಕಾಂಬಳೆ(38) ಮೃತಪಟ್ಟ ವ್ಯಕ್ತಿ.
ವೃತ್ತಿಯಲ್ಲಿ ಪೇಂಟರ್ ಆಗಿರುವ ರಮೇಶ್ ಕಾಂಬಳೆ ಮಾ.28ರಂದು ಬೆಳಗಾವಿಯಿಂದ ದಿಢೀರ್ ಆಗಿ ನಾಪತ್ತೆಯಾಗಿದ್ದರು. ಈ ಕುರಿತು ಏ.5ರಂದು ಆತನ ಪತ್ನಿ ಸಂಧ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ತನಿಖೆ ಶುರುಮಾಡಿದ ಪೊಲೀಸರಿಗೆ ತನ್ನ ಗಂಡ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆಂದು ಪತ್ನಿ ಸಂಧ್ಯಾ ಸುಳ್ಳು ಹೇಳಿದ್ದಳು. ಈ ಘಟನೆ ಕುರಿತು ಪೊಲೀಸರಿಗೆ ಅನುಮಾನ ಬಂದು, ಪೊಲೀಸರು ರಮೇಶ್ ಪತ್ನಿ ಸಂಧ್ಯಾ ಹಾಗೂ ರಮೇಶ್ ಸ್ನೇಹಿತರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾವೇ ಕೊಲೆ ಮಾಡಿರುವುದಾಗಿ ರಮೇಶ್ ಪತ್ನಿ ಹಾಗೂ ಸ್ನೇಹಿತರು ಬಾಯ್ಬಿಟ್ಟಿದ್ದಾರೆ. ರಮೇಶ್ ಪತ್ನಿ ಸಂಧ್ಯಾ ಹಾಗೂ ಬಾಳು ಬಿರಂಜೆ ನಡುವೆ ಅನೈತಿಕ ಸಂಬಂಧವಿದ್ದು, ಪ್ರಿಯಕರ ಬಾಳು ಜತೆ ಸೇರಿಕೊಂಡು ಪತಿ ರಮೇಶ್ನನ್ನ ಕೊಲೆ ಮಾಡಿದ್ದೇನೆ ಸಂದ್ಯಾ ಒಪ್ಪಿಕೊಂಡಿದ್ದಾಳೆ.
ಆರೋಪಿ ಪತ್ನಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರು ಜೊತೆಗೂಡಿ ಕೊಲೆ ಮಾಡಿ, ಗೋವಾದ ಚೋರ್ಲಾ ಘಾಟ್ನಲ್ಲಿ ಶವ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ರಮೇಶ್ಗೆ ನಿದ್ರೆ ಮಾತ್ರೆಯನ್ನ ನೀಡಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾರೆ. ರಮೇಶ್ ಮೃತದೇಹ ಪತ್ತೆಗೆ ಮುಂದಾಗಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.