ವಾಷಿಂಗ್ಟನ್ (www.vknews.in) : 111 ವರ್ಷಗಳ ಹಿಂದೆ ಜಲಸಮಾಧಿಯಾಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ ಎಂದು ಈ ಜಲ ಪ್ರವಾಸವನ್ನು ಆಯೋಜನೆ ಮಾಡಿದ್ದ ಓಷನ್ ಗೇಟ್ ಸಂಸ್ಥೆ ಖಚಿತ ಪಡಿಸಿದೆ.
ಸಾಹಸಯಾತ್ರೆಯ ಅಂಗವಾಗಿ ಫ್ರಾನ್ಸ್ನ ನಿವೃತ್ತ ನೌಕಾಪಡೆ ಅಧಿಕಾರಿ ಪೌಲ್ ಹೆನ್ರಿ ನಾರ್ಗೊಲೆಟ್, ಬ್ರಿಟನ್ನ ಸಿರಿವಂತ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಕ್ ಉದ್ಯಮಿ ಶೆಹಜಾದಾ ದಾವೂದ್ ಮತ್ತು ಅವರ ಪುತ್ರ ಸುಲೇ ಮಾನ್ ಮತ್ತು ಓಷನ್ ಗೇಟ್ ಕಂಪನಿಯ ಸಿಇಒ ಸ್ಟಾಕ್ಟನ್ ರಶ್ ಜಲಾಂತರ್ಗಾಮಿಯಲ್ಲಿ ತೆರಳಿದ್ದರು. ಅಂದೇ ನಾಪತ್ತೆಯಾಗಿದ್ದ ಈ ನೌಕೆಗಾಗಿ ಸತತ ಶೋಧ ಕಾರ್ಯ ನಡೆಯುತ್ತಲೇ ಇದೆ. ಇದುವರೆಗೂ ಈ ಜಲಾಂತರ್ಗಾಮಿ ಪತ್ತೆಯಾಗಿಲ್ಲ. ಅಲ್ಲದೆ, 92 ಗಂಟೆಗಳ ಕಾಲ ಆಗುವಷ್ಟಿದ್ದ ಆಮ್ಲಜನಕವೂ ಮುಗಿದಿತ್ತು.
ಯುಎಸ್ ಕೋಸ್ಟ್ ಗಾರ್ಡ್ ರಿಮೋಟ್ ನಿಯಂತ್ರಿತ ವಾಹನದ ಮೂಲಕ ನೀರಿನ ಅಡಿಯಲ್ಲಿ ಗುರುವಾರ ಪತ್ತೆಯಾದ ಅವಶೇಷಗಳನ್ನು ಪರಿಶೀಲಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಅವಶೇಷಗಳು ಟೈಟಾನಿಕ್ ನಿಂದ 1,600 ಅಡಿಗಳು (488 ಮೀಟರ್) ಅಡಿಯಲ್ಲಿ ಕಂಡುಬಂದಿವೆ. ತಕ್ಷಣವೇ ಸಂಬಂಧಿತರ ಕುಟುಂಬಗಳಿಗೆ ಸೂಚಿಸಿದ್ದೇವೆ ಎಂದು ರಿಯರ್ ಅಡ್ಮಿರಲ್ ಜಾನ್ ಮೌಗರ್ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.