(www.vknews.in) ; ಗಲ್ಫ್ ದೇಶಗಳಲ್ಲಿ ಬಹಳ ವರ್ಷ ದುಡಿದು ಈಗ ಊರಿನಲ್ಲಿ ವಾಸವಾಗಿರುವವರ ಗಲ್ಫ್ ರಿಟಾಯರ್ಡ್ ಎಸೋಸಿಯೇಶನ್ ಮಂಗಳೂರು ಇದರ ಮೊದಲ ಸಭೆಯು ದಿನಾಂಕ 24-06-2023 ರಂದು ಮಂಗಳೂರಿನ ಜಮೀಯತುಲ್ ಫಲಾಹ ಸಭಾಗಣದಲ್ಲಿ ಜರಗಿತು. ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಸುಮಾರು 60 ರಷ್ಟು ಸದಸ್ಯರು ಪಾಲ್ಗೊಂಡಿದ್ದರು.
ಗಲ್ಫ್ ರಿಟಾಯರ್ಡ್ ಎಸೋಸಿಯೇಶನ್ ಮಾಡುವ ಉದ್ದೇಶ ಹಾಗೂ ಅದರಿಂದ ನಾವು ಮುಂದಕ್ಕೆ ಮಾಡಬಹುದಾದ ಕಾರ್ಯ ಯೋಜನೆಯ ಬಗ್ಗೆ ವಿಸ್ತೃತವಾಗಿ ಅಭಿಪ್ರಾಯವನ್ನು ಹಂಚಿಕೊಳ್ಳಲಾಯಿತು. ಮತ್ತು ಈ ಸಮಿತಿಯ ಕಾರ್ಯವ್ಯಾಪ್ತಿಯ ಬಗ್ಗೆ ಚರ್ಚಿಸಲಾಯಿತು. ಎಲ್ಲರ ಅಭಿಪ್ರಾಯವನ್ನು ಕ್ರೋಡೀಕರಿಸಿ ಮೊದಲ ಹಂತವಾಗಿ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಗಿದ್ದು, ಅಸೋಶಿಯೇಶನ್ ಅಧ್ಯಕ್ಷರಾಗಿ ಮಿತ್ತೂರು ಹಂಝ, ಉಪಾಧ್ಯಕ್ಷರಾಗಿ ಆದಂ ಬ್ಯಾರಿ, ಕಾರ್ಯದರ್ಶಿಯಾಗಿ ಅರಬಿ ಶೇಕ್ ಬಶೀರ್, ಜೊತೆ ಕಾರ್ಯದರ್ಶಿಯಾಗಿ ಎಂ.ಯೂಸುಫ್ ಮತ್ತು ಖಜಾಂಜಿಯಾಗಿ ಮೊಹಮ್ಮದ್ ಅನ್ವರ್ ಫಳ್ನೀರ್ ಇವರನ್ನು ಆರಿಸಲಾಯಿತು.
ಈ ಕಾರ್ಯಕ್ರಮದ ರೂವಾರಿ ಹಾಗೂ ಇಂತಹ ಒಂದು ಅಸೋಶಿಯೇಶನ್ ರಚನೆ ಮಾಡುವ ಬಗ್ಗೆ ಯೋಚನೆಯನ್ನು ತಂದು ಕಾರ್ಯಗತ ಮಾಡಿದಂತಹ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ.ಬೊಳ್ಳಾಯಿ ಅವರನ್ನು ಅಸೋಶಿಯೇಶನ್ ನ ಗೌರವಾಧ್ಯಕ್ಷ ರಾಗಿ ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.