ಮಂಗಳೂರು (www.vknews.in) : ಮತೀಯ ದ್ವೇಷಿತ ಹತ್ಯೆಯಲ್ಲಿ ಮೃತರಾದ ಬಶೀರ್, ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಅಮಾಯಕರಾದ ನೌಶೀನ್ ಮತ್ತು ಜಲೀಲ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಅಪೇಕ್ಷಿಸಿ, ಕೆ.ಅಶ್ರಫ್ ನೇತೃತ್ವದ ಮುಸ್ಲಿಮ್ ಒಕ್ಕೂಟ ನಿಯೋಗ, ಮೃತರ ಕುಟುಂಬ ಸದಸ್ಯರೊಂದಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಇಂದು ಮಂಗಳೂರಿನಲ್ಲಿ ಮನವಿ ಸಲ್ಲಿಸಿತು.
ಸಂತ್ರಸ್ತ ಕುಟುಂಬವು ಪರಿಹಾರ ಪಡೆಯಲು ಅರ್ಹವಾಗಿದೆ ಎಂಬುದರ ಬಗ್ಗೆ ಕೆ.ಅಶ್ರಫ್ ರವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾಪ ಸಲ್ಲಿಸಿದರು. ನಿಯೋಗದಲ್ಲಿ ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಅಶ್ರಫ್ ಬದ್ರಿಯಾ, ಸಿ. ಎಮ್.ಮುಸ್ತಾಫಾ, ಷರೀಫ್, ಸಿರಾಜ್, ಹಕೀಮ್, ಷರೀಫ್ ಕೂಳೂರು, ನೌಫಲ್ ಮತ್ತು ಅರ್ಷದ್ ಕಂದಕ್ ಮತ್ತು ಸಂತ್ರಸ್ತ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.