(www.vknews.in) ದಾರುಲ್ ಪೌಝ್ ರಿಫಾರ್ಮ್(ರಿ) ‘ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಶಾಫಿ ಜುಮಾ ಮಸ್ಜಿದ್ ಕೊಲ್ನಾಡ್ ಜಮಾತಿಗೊಳಪೆಟ್ಟ ಮುಮ್ತಾಝ್ ಎಂಬವರ ಮನೆಯ ಕೀಲಿ ಕೈ ದಿನಾಂಕ 30/6/2022 ರ ಶುಕ್ರವಾರದಂದು ಹಸ್ತಾಂತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶಂಶೀರ್ ಕಾರ್ಕಳರವರು ಮನೆ ಮಾಲೀಕರಿಗೆ ಕೀಲಿ ಕೈ ಹಸ್ಥಾoರಿತಿಸಿದರು. ಜಮಾತ್ ಖತೀಬಾರದ ಶರೀಫ್ ದಾರಿಮಿ ಹಲ್ ಹೈತಮಿ ದುಃಹ ನೆರವೇರಿಸಿ ನಮ್ಮ ಸಂಸ್ಥೆಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಸ್ಥೆಯ ಸ್ಥಾಪಕರಾದ ಶಾಝ್ ಮುಲ್ಕಿ ಮಾತನಾಡಿ ಬಡ ಕುಟುಂಬಕ್ಕೆ ಸಹಕರಿಸಿದ ಸರ್ವ ದಾನಿಗಳಿಗೆ DFR ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಕಾರ್ಯ ನಿರ್ವಾಹಕ ಮುಸ್ತಾಫಾ ಬೋಳಿಯಾರ್ ಸಂಸ್ಥೆಯ ಸರ್ವ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಅಡ್ವೊಕೇಟ್ ಝೀಶಾನ್ ಅಲಿ, ಜಲೀಲ್ ಕಲಾರ, ನಿಚ್ಚು ಮಂಗಳೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಮಾತ್ ಅಧ್ಯಕ್ಷರು ಹನೀಫ್, ಊರಿನ ಗಣ್ಯರಾದ ಅಹಮದ್ ಭಾವ,ಆಸೀಫ್, ಮುಸ್ತಫಾ ಹಾಗೂ ಶಹೀರ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಅನೀಸ್ ಕುಕ್ಕಾಜೆ, ಖಲೀಲ್ ಮುಡಿಪು ಶುಭಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.