ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ದೇರಳಕಟ್ಟೆಯ ಸಿಟಿ ಪ್ಲಾಝಾ ಬಿಲ್ಡಿಂಗ್ ನಲ್ಲಿರುವ Helth & glo ಎಂಬ ಒಂದು ಕ್ಲಿನಿಕ್ ನಲ್ಲಿ ದೇಹದ ಕಲೆ, ಮಚ್ಚೆ, ಉಣ್ಣಿ ಮುಂತಾದವುಗಳನ್ನು ಮೆಶಿನ್ ಮೂಲಕ ನಿವಾರಿಸುತ್ತಾರೆ. ಕೇರಳದ ಮಲಪುರಂ ಜಿಲ್ಲೆಯವರಾದ ಡಾಕ್ಟರ್ ನಿಸಾರ್ ಎಂಬ ಯುವ ವೈದ್ಯರ ಈ ಸೇವೆ ನಿಜಕ್ಕೂ ಬಹಳ ಉಪಕಾರಿ.
ನಾನು ಸ್ವತಃ ಹೋಗಿ ನನ್ನ ದೇಹದ ಕೆಲವು ಕಲೆಗಳನ್ನು ನಿವಾರಿಸಿಕೊಂಡ ಅನುಭವದ ಆಧಾರದಲ್ಲಿ ಇದನ್ನು ಬರೆಯುತ್ತಿದ್ದೇನೆ. ಜನರಿಗೆ ಉಪಕಾರವಾಗಲಿ ಎಂಬ ಸದುದ್ದೇಶ ಮಾತ್ರವೇ ಹೊರತು ಈ ವೈದ್ಯರ ಜೊತೆಗೆ ನನಗೆ ಯಾವುದೇ ಸಂಬಂಧ ಇರುವುದಿಲ್ಲ. ವಿಶೇಷತಃ ಯುವತಿಯರಿಗೆ ಕಪ್ಪು ಕಲೆಗಳ ಕಾರಣದಿಂದ ಮದುವೆ ಭಾಗ್ಯ ಕೂಡಿ ಬರದಿರುವ ಅನುಭವ ಧಾರಾಳ ಇದೆ. ಅಂತಹ ಯುವತಿಯರಿಗೆ ಇದು ಬಹಳ ಉಪಕಾರಿಯಾಗಿರುತ್ತದೆ.
ದೇಹಕ್ಕೆ ಪಚ್ಚೆ ಹಚ್ಚುವುದು ಇಸ್ಲಾಮೀ ಶರೀಅತ್ ಪ್ರಕಾರ ನಿಷಿದ್ಧವಾಗಿದೆ. ಇದರಿಂದ ವುಝೂ, ಜನಾಬತ್ ಸ್ನಾನ ಮುಂತಾದ್ದು ಅಸಿಂಧುವಾಗುವ ಸಂಭವ ಕೂಡಾ ಇರುತ್ತದೆ. ಇದು ತಿಳಿಯದೆ ಯಾರಾದರೂ ಮುಸ್ಲಿಮ್ ಹುಡುಗಿಯರು ಪಚ್ಚೆ ಹಚ್ಚಿಕೊಂಡಿದ್ದರೆ ಇಲ್ಲಿ ಪರಿಹಾರ ಕಾಣಬಹುದು. ಅಲ್ಲದೆ ಮುಖ, ಕೊರಳು ಮುಂತಾದವುಗಳಲ್ಲಿ ಕಾಣಿಸಿಕೊಳ್ಳುವ ಉಣ್ಣಿ ಕೂಡಾ ದೊಡ್ಡ ಮುಜುಗರದ ಒಂದು ಸಮಸ್ಯೆಯಾಗಿದೆ. ಅದಕ್ಕೂ ಇಲ್ಲಿ ಪರಿಹಾರವಿದೆ. ಇದರಲ್ಲಿ ಇನ್ನೊಂದು ಪ್ಲಸ್ ಪಾಯಿಂಟ್ ಏನೆಂದರೆ ಬಹಳ ಕಡಿಮೆ ಶುಲ್ಕದಲ್ಲಿ ಮಾಡಿಕೊಡುತ್ತಿದ್ದಾರೆ ಎಂಬುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.