(www.vknews.in) ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿಯಲ್ಲಿ ಸುಮಾರು 9 ವರ್ಷದಿಂದ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈ ವರ್ಷ ನಡೆದ ವರ್ಗಾವಣೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಸ್ಯಮೂಡುರು ಗೆ ವರ್ಗಾವಣೆ ಆಗಿರುವ ಶ್ರೀಮತಿ ಹರಿಣಾಕ್ಷಿ ಕೆ ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಇಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಇದರೊಂದಿಗೆ ಸುಮಾರು ವರ್ಷದಿಂದ ಶಾಲೆಯಲ್ಲಿ ಅತಿಥಿ ಹಾಗೂ ಗೌರವ ಶಿಕ್ಷಕಿಯರಾಗಿ ಸೇವೆ ಸಲ್ಲಿಸಿದ ಕುಮಾರಿ ರಮ್ಯ ಶ್ರೀ , ಶ್ರೀಮತಿ ಕಾವ್ಯ , ಶ್ರೀಮತಿ ಚೈತ್ರ,ಕುಮಾರಿ ಕಲ್ಪನಶ್ರಿ ಹಾಗೂ ಕುಮಾರಿ ರಮ್ಯ ರವರಿಗೆ ಶಾಲಾ ಎಸ್ಡಿಎಂಸಿ ವತಿಯಿಂದ ಬೀಳ್ಕೊಡುಗೆ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು .
ಅದೇ ರೀತಿ ಎಸ್ಡಿಎಂಸಿ ಯಲ್ಲಿ ಸುಮಾರು ವರ್ಷದಿಂದ ಸದಸ್ಯರಾಗಿದ್ದು ತನ್ನ ಮಕ್ಕಳು ಮುಂದಿನ ತರಗತಿಗೆ ತೇರ್ಗಡೆ ಗೊಂಡ ಅನಿವಾರ್ಯ ಕಾರಣದಿಂದ ಸಮಿತಿಯಿಂದ ನಿರ್ಗಮಿಸಿದ ಶ್ರೀಮತಿ ರಹಮತ್ ಬೀಬಿ ರವರನ್ನು ಕೂಡ ಈ ಸಮಯದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
ಈ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಗೊಂಡು ಮಾದರಿ ಶಾಲೆಗೆ ಬಂದಿರುವ 9 ಶಿಕ್ಷಕರನ್ನು ಸ್ವಾಗತಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಕಳ್ಳಲಿಕೆ, ಮಾಜಿ ಅಧ್ಯಕ್ಷರಾದ ಚಂದ್ರಣ್ಣ ,ಅಬ್ದುಲ್ ರಹಿಮಾನ್ ಯುನಿಕ್,ಹರೀಶ್ ನಾಯಕ್ ಹಾಗೂ ಜಮಾಲ್ ಕಡವಿನಬಾಗಿಲು ಎಸ್ಡಿಎಂಸಿ ಸದಸ್ಯರಾದ ಫಾರೂಕ್ ಜಿಂದಗಿ,ಅಬ್ದುಲ್ ಮಜೀದ್, ಸಂತೋಷ್ ಕುಮಾರ್,ಶೀಲಾ, ಖೈರುನ್ನಿಸ, ನಸೀಮ, ರಝೀನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.