ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ ರೂ 10 ನಾಣ್ಯಗಳು ಚಲಾವಣೆಯಲ್ಲಿದ್ದು , ಎಲ್ಲರೂ ತಮ್ಮ ದಿನ ನಿತ್ಯದ ವಹಿವಾಟುಗಳಲ್ಲಿ ಯಾವುದೇ ಸಂಶಯವಿಲ್ಲದೆ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸ್ಪಷ್ಟಪಡಿಸಿದರು.
ನಗರ ಹೊರವಲಯದ ಕಚೇರಿಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವು ಕಡೆ ರೂ 10 ನಾಣ್ಯಗಳನ್ನು ಆರ್.ಬಿ.ಐ ನಿಷೇಧಿಸಿದೆ ಎಂದು ಸುಳ್ಳು ವದಂತಿಗಳನ್ನು ಹರಡಿದ ಪರಿಣಾಮ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ . ಆದರೆ ಕೇಂದ್ರ ಸರ್ಕಾರವಾಗಲಿ , ಆರ್.ಬಿ.ಐಯಾಗಲಿ ರೂ 10 ನಾಣ್ಯಗಳನ್ನು ನಿಷೇಧಿಸಿಲ್ಲ ಹಾಗೂ ಚಲಾವಣೆಯನ್ನು ಹಿಂಪಡೆದಲ್ಲಿ. ಸಾರ್ವಜನಿಕರು ಸುಳ್ಳು ವದಂತಿಗಳನ್ನು ನಂಬದೆ ರೂ 10 ನಾಣ್ಯಗಳನ್ನು ಸ್ವೀಕರಿಸಬಹುದು ಮತ್ತು ಅದನ್ನು ಬಳಸಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್ ಸುಧೀರ್ ಮಾತನಾಡಿ , ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಒಳಗಾಗದೆ ನಾಣ್ಯಗಳನ್ನು ರೂ 10 ಬಳಸಬಹುದು ಹಾಗೂ ಬ್ಯಾಂಕ್ಗಳಲ್ಲಿ ಠೇವಣಿ ಮಾಡಬಹುದು. ರೂ 10 ನಾಣ್ಯಗಳನ್ನು ಸ್ವೀಕರಿಸದೆ ಇರುವುದು,ನಾಣ್ಯ ಕಾಯ್ದೆ 2011 ರ ಸೆಕ್ಷನ್ 6 (1) ಸ್ಪಷ್ಟ ಉಲ್ಲಂಘನೆಯಾಗುತ್ತದೆ.
ಜಿಲ್ಲೆಯ ಎಲ್ಲಾ ಬ್ಯಾಂಕ್ಗಳು , ವ್ಯಾಪಾರಸ್ಥರು , ಸಾರ್ವಜನಿಕರು ರೂ 10 ನಾಣ್ಯಗಳನ್ನು ಭಯಮುಕ್ತವಾಗಿ ಸ್ವೀಕರಿಸಿ , ಅದನ್ನು ಬಳಸಬಹುದಾಗಿದೆ ಎಂದು ತಿಳಿಸಿದರು. ರೂ 10 ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ . ಆರ್.ಬಿ.ಐ ಹಲವು ಬಾರಿ ರೂ 10 ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ ಕೂಡ ಎಂದು ಸ್ಪಷ್ಟಪಡಿಸಿದರು , ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಖಲೀಲ್ ಸಾಬ್ , ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ , ಕ.ರಾ.ರ.ಸಂಸ್ಥೆ ಪಾಂಡುರಂಗನಾಯ್ಡು ಬ್ಯಾಂಕ್ಗಳ ಲೆಕ್ಕಾಧಿಕಾರಿ ಸೇರಿದಂತೆ ವಿವಿಧ ವ್ಯವಸ್ಥಾಪಕರು , ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.