ಮಂಗಳೂರು (www.vknews.in) : ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ ಎರಡು ಕಿಲೋ ಚಿನ್ನವನ್ನು ಏರ್ ಕಸ್ಟಮ್ಸ್ ವಶಪಡಿಸಿಕೊಂಡಿದೆ. ನಿನ್ನೆ ಬೆಳಗ್ಗೆ ಅಬುಧಾಬಿಯಿಂದ ಮಂಗಳೂರಿಗೆ ತೆರಳಿದ್ದ ಕಾಸರಗೋಡು ಮೂಲದ ಮುಹಮ್ಮದ್ ನೌಫಲ್ ಎಂಬಾತನಿಂದ 1183 ಗ್ರಾಂ ಚಿನ್ನದ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಮಿಶ್ರಣವನ್ನು 4 ಕ್ಯಾಪ್ಸುಲ್ಗಳಾಗಿ ಮಾಡಿ ಗುದನಾಳದಲ್ಲಿ ಅಡಗಿಸಡಲಾಗಿತ್ತು. ಏರ್ ಕಸ್ಟಮ್ಸ್ ಪ್ರಕಾರ, ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 70,62,510 ರೂ. ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ದುಬೈನಿಂದ ಮಂಗಳೂರಿಗೆ ತೆರಳಿದ್ದ ಕಾಸರಗೋಡು ಮೂಲದ ಅಹಮದ್ ಕಬೀರ್ ಎಂಬಾತನಿಂದಲೂ 767 ಗ್ರಾಂ ಚಿನ್ನದ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಗಾರದ ಮಿಶ್ರಣವನ್ನು 3 ಕ್ಯಾಪ್ಸುಲ್ ಗಳಲ್ಲಿ ಗುದನಾಳದಲ್ಲಿ ಬಚ್ಚಿಟ್ಟು ಕೊಂಡಿದ್ದು, ಈತನಿಂದ ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ರೂ.45,78,990/- ಆಗಿರುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.