ತಿರುವನಂತಪುರಂ (www.vknews.in) ; ಎದೆಹಾಲು ಗಂಟಲಿಗೆ ಸಿಲುಕಿ ಪುಟ್ಟ ಮಗು ಮೃತಪಟ್ಟಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಬಲರಾಮಪುರಂ ಪಳ್ಳಿಚಲ್ ಪೂಂಕೋಡ್ ಈಜುಕೊಳದ ಬಳಿ ಜಿನಿಮೋಳ್-ಜಯಕೃಷ್ಣನ್ ದಂಪತಿಯ ಮಗು ಸಾವನ್ನಪ್ಪಿದೆ. ಮಗುವಿಗೆ ಮೂರು ತಿಂಗಳಾಗಿತ್ತು. ಈತ ದಂಪತಿಗೆ ಒಬ್ಬನೇ ಮಗ.
ಎದೆ ಹಾಲು ಗಂಟಲಿಗೆ ಸಿಲುಕಿ, ಉಸಿರುಗಟ್ಟಿದ ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.