ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೀಬ್ ಮದ್ರಸದಲ್ಲಿ ನಡೆಯಿತು.
ಜನಾಬ್ ಅಯ್ಯೂಬ್ ಕೋಡಿಯವರ ಅಧ್ಯಕ್ಷತೆಯಲ್ಲಿ ಅಸ್ಮಾವುಲ್ ಬದ್ರಿಯ್ಯತ್ ನೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಸೈಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರು ದುಆ ಕ್ಕೆ ನೇತೃತ್ವ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಉಮರ್ ಸಖಾಫಿ ಎಡಪ್ಪಾಲ ಉಸ್ತಾದ್ ರವರು ನೆರವೇರಿಸಿ ಸಂಘಟನೆಯ ಬಲವರ್ಧನೆಗೆ ಕಾರ್ಯಕರ್ತರಿಗೆ ಹುರುಪು ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾದಿಕ್ ಹಾಜಿ ಸುಳ್ಯ ವರದಿ ವಾಚಿಸಿದರು ಹಾಗೂ ಕೋಶಾಧಿಕಾರಿ ಆರಿಫ್ ಕೋಡಿಯವರು ಲೆಕ್ಕಪತ್ರವನ್ನು ಮಂಡಿಸಿ ಮಂಜೂರು ಮಾಡಲಾಯಿತು. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯಿಂದ RO ಆಗಿ ಬಂದ ಜನಾಬ್ ಇಕ್ಬಾಲ್ ಬೊಳ್ಮಾರ್ ಬರ್ಕರವರು ಸೇರಿದ ಕೌನ್ಸಿಲರ್ಸ್ ಗಳಿಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿ ನಾಯಕರನ್ನು ಇನ್ನಷ್ಟು ಸಂಘಟನೆಯಲ್ಲಿ ಕಾರ್ಯಾಚರಿಸಲು ಪ್ರೇರೇಪಿಸಿದರು.
ಇತ್ತೀಚೆಗೆ ಭಾರತದಿಂದ ಉಡಾವಣೆಯಾದ ಚಂದ್ರಯಾನ -3 ಎಂಬ ವಿಷಯವನ್ನು ಸ್ಥಳದಲ್ಲೇ ಕೊಟ್ಟು ಕಾರ್ಯಕರ್ತರಲ್ಲಿ ವಿವರಿಸಲು ಹೇಳಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕೆಸಿಎಫ್ ಸದಸ್ಯರು ಪರಸ್ಪರ ಅರಿತಿರಲು ವಿಶೇಷ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮಗಳ ಸದಸ್ಯರಲ್ಲಿ ಹೊಸ ಆವೇಷವನ್ನು ಸ್ರಷ್ಟಿಸಿದರು.
ನಂತರ ನಡೆದ ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಪುನರ್ ಸಂಘಟಿಸಲಾಯಿತು. ಅಧ್ಯಕ್ಷರಾಗಿ ಅಯ್ಯೂಬ್ ಕೋಡಿ, ಪ್ರ.ಕಾರ್ಯದರ್ಶಿಯಾಗಿ ಸ್ವಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿಯಾಗಿ ಆರಿಪ್ ಕೋಡಿಯವರು ಆಯ್ಕೆಯಾದರು ಹಾಗೂ ಕ್ಯಾಬಿನೆಟ್ ಮತ್ತು ಎಕ್ಷಿಕ್ಯೂಟಿವ್ ಸಮಿತಿಯಲ್ಲಿ ವಿಷೇಶವಾಗಿ ಬದಲಾವಣೆಯನ್ನು ಮಾಡದೇ ಕೇವಲ ಸಣ್ಣ ಮಟ್ಟದ ಬದಲಾವಣೆವನ್ನು ಮಾತ್ರ ಮಾಡಿ ಸಮಿತಿಯನ್ನು ರಚಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮತಿ ಇಹ್ಸಾನ್ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್, ಕೆಸಿಎಫ್ IC ಶಿಕ್ಷಣ ವಿಭಾಗದ ಕಾರ್ಯದರ್ಶಿಗಳಾದ ಸೈಯಿದ್ ಆಬಿದ್ ಅಲ್ ಹೈದ್ರೋಸಿ ಅವರುಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ ಸ್ವಾಗತಿಸಿ ಉಬೈದುಲ್ಲಾ ಸಖಾಫಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.