ಬದಿಯಡ್ಕ (www.vknews.in) : ಶಾಲಾ ಬಸ್ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಸೋಮವಾರ ಸಂಜೆ 5.20ರ ಸುಮಾರಿಗೆ ಬದಿಯಡ್ಕ ಪಲ್ಲತಡ್ಕದಲ್ಲಿ ನಾಡನ್ನೇ ಬೆಚ್ಚಿಬೀಳಿಸಿದ ದುರಂತ ನಡೆದಿದೆ.
ತಾಯ್ಲಂಗಡಿ ಮೂಲದ ಎ.ಎಚ್.ಅಬ್ದುರ್ ರವೂಫ್ (58), ಮೊಗ್ರಾಲ್ ಪುತ್ತೂರು ಮೊಗರು ನಿವಾಸಿ, ಶೇಖ್ ಅಲಿ ಅವರ ಪತ್ನಿ ಬೀಫಾತ್ವಿಮಾ (60), ಮೊಗರುದ ಉಸ್ಮಾನ್ ಅವರ ಪತ್ನಿ ಬೀಫಾತ್ವಿಮಾ (50), ಇಸ್ಮಾಯಿಲ್ ಅವರ ಪತ್ನಿ ಉಮ್ಮು ಹಲೀಮಾ ಮತ್ತು ಬೆಳ್ಳೂರಿನ ಅಬ್ಬಾಸ್ ಅವರ ಪತ್ನಿ ನಫೀಸಾ ಮೃತಪಟ್ಟವರು.
ಗ್ಲೋಬಲ್ ಪಬ್ಲಿಕ್ ಶಾಲೆಯ ಬಸ್ ಪೆರ್ಲದಿಂದ ಹಿಂತಿರುಗುತ್ತಿದ್ದಾಗ ಮೊಗ್ರಾಲ್ ಪುತ್ತೂರು ಮೊಗರು ಕಡೆಯಿಂದ ಪೆರ್ಲದ ಸಾವಿನ ಮನೆಗೆ ಮಹಿಳೆಯರನ್ನು ಹೊತ್ತೊಯ್ಯುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಶಾಲಾ ಮಕ್ಕಳನ್ನೆಲ್ಲ ಇಳಿಸಿ ಶಾಲಾ ಬಸ್ ಹಿಂತಿರುಗುತ್ತಿತ್ತು. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.