ಲಂಡನ್ (www.vknews.in) : ಪೈಗಂಬರ್ ಮುಹಮ್ಮದ್ ಸಲ್ಲಾಲಹು ಅಲೈಹಿವಸಲ್ಲಂ ಜನ್ಮದಿನಾಚರಣೆಯ ಪ್ರಯುಕ್ತ ಕೆ.ಸಿ.ಎಫ್ ಯುನೈಟೆಡ್ ಕಿಂಗ್ಡಮ್ ಇದರ ವತಿಯಿಂದ ರಬೀಅ’ 23 ಗ್ರಾಂಡ್ ಮೌಲಿದ್ ಕಾನ್ಫರೆನ್ಸ್ 23 ಸೆಪ್ಟೆಂಬರ್ ಶನಿವಾರ ಅಪರಾಹ್ನ 3:30 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಅದ್ಧೂರಿಯಾಗಿ Central Mosque of Brent, ಲಂಡನ್ ಎಂಬಲ್ಲಿ ಜರುಗಿತು. ಕಾರ್ಯಕ್ರಮವು ಇಸ್ಮಾಯಿಲ್ ನೂರಾನಿ, ಯಾಸೀನ್ ಬಾಖವಿ ಹಾಗೂ ಶಹೀದ್ ಮುಈನಿ ನೇತ್ರತ್ವದಲ್ಲಿ ಮಂಖೂಸ್ ಮೌಲಿದ್ ಹಾಗೂ ದುಆ ಮೂಲಕ ಆರಂಭಗೊಂಡಿತು.
ಕಾರ್ಯಕ್ರಮದಲ್ಲಿ ಅಲ್ ಹಾಜ್ ಖಾರೀ ಮುಹಮ್ಮದ್ ರಿಝ್ವಾನ್ ಖಾನ್ ದಿಕ್ಸೂಚಿ ಭಾಷಣ ಮಾಡಿದರು. ಯುನೈಟೆಡ್ ಕಿಂಗ್ಡಮ್ ನ ಪ್ರಸಿದ್ಧ ನೂರೀ ಬುರ್ದಾ ತಂಡದಿಂದ ಕಸೀದತುಲ್ ಬುರ್ದಾ ಹಾಗೂ ನಅತ್ ಕಾರ್ಯಕ್ರಮ ನಡೆಯಿತು, ಬುರ್ದಾ ಆಲಾಪನೆಯ ಒಂದು ವಿಶೇಷ ಶೈಲಿಯಲ್ಲಿ ನಡೆದಿದ್ದು ನೆರೆದ ಎಲ್ಲರನ್ನೂ ಆಕರ್ಷಿಸಿತು, ಪ್ರಶಂಶೆಗೆ ಪಾತ್ರವಾಯಿತು.
ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಅಲ್ ಇಹಸಾನ್ ಯುನೈಟೆಡ್ ಕಿಂಗ್ಡಮ್ ಇದರ ದಅವಾ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ನೂರಾನಿ ಇವರನ್ನು ಕೆಸಿಎಫ್ ಆಯ್ದ ವಾರ್ಷಿಕ ವ್ಯಕ್ತಿ ಎಂಬ ನೆಲೆಯಲ್ಲಿ ಸನ್ಮಾನಿಸಲಾಯಿತು. ಅದೇ ರೀತಿ ಹಫೀಜ್ ಅಹಮದ್ ಕೆಸಿಎಫ್ ವಿಧ್ಯಾರ್ಥಿ ವಿಭಾಗದ ಮುಖ್ಯಸ್ಥ ಇವರನ್ನು ಕೆಸಿಎಫ್ ಯೂತ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಲ್ ಇಹಸಾನ್ ಯುನೈಟೆಡ್ ಕಿಂಗ್ಡಮ್ ಇದರ ಚೇರ್ಮನ್ ಅಬ್ದುಲ್ ಅಝೀಝ್ ಉಸ್ತಾದ್, ಮುನೀಬ್ ನೂರಾನಿ ಹಾಗೂ ಲಂಡನ್ ಮಸ್ಜಿದುಲ್ ಕುಬಾ ಇದರ ಇಮಾಮ್ ಮುಫ್ತಿ ಇರ್ಷಾದ್ ನಜ್ಮಿ ಆಶಂಶ ಭಾಷಣ ಮಾಡಿದರು. ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಅಧ್ಯಕ್ಷ ರಹೀಂ ಅಬ್ದುಲ್ಲಾ ರವರು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಧಾಟನೆ ಮಾಡಿದರು.
ಕಾರ್ಯದರ್ಶಿ ಫಿರೋಜ್ ಕಬಕ ಸ್ವಾಗತ. ಕೆಸಿಎಫ್ ಮಿಲಾದ್ ಕಾನ್ಫರೆನ್ಸ್ ನ ಚೇರ್ಮನ್ ಅಬ್ಬಾಸ್ ಮಾಖ್ಯಾರ್ ನೆರೆದ ಎಲ್ಲರನ್ನೂ ವಂದಿಸಿದರು. ಕೆಸಿಎಫ್ ನ ಸಂಘಟನಾ ಕಾರ್ಯದರ್ಶಿ ಹನೀಫ್ ಎಂಜಿನಿಯರ್ ಅಂದಿನ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯದಾಗಿ ಕೆಸಿಎಫ್ ನ ಕಾರ್ಯಕರ್ತರೇ ತಯಾರಿಸಿದ ಕರಾವಳಿ ಭಾಗದ ಶೈಲಿಯಲ್ಲಿನ ಭೋಜನ ಏರ್ಪಡಿಸಲಾಗಿದ್ದು, ಇದು ಅಂದಿನ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.