ಮಂಗಳೂರು (www.vknews.in) : ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಳ್ಳುವವರಿಗೆ ಕೋಮುವಾದವನ್ನು ದೂರುತ್ತಿದ್ದು, ಮೈತ್ರಿಯ ನಂತರ ಹಿಂದೂ ಕೋಮುವಾದ,ಮುಸ್ಲಿಮ್ ಕೋಮುವಾದ ಎಂದು ತಾವು ನಡೆಸಿದ ಸಂವಾದದಲ್ಲಿ ತುಲನೆಗೊಳಿಸಲು ಆರಂಭಿಸಿರುತ್ತಾರೆ. ಜಾತ್ಯಾತೀತ ನಾಮಫಲಕವಿಟ್ಟು ಅಂದು ಕೋಮುವಾದಿ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೆ ಮಾಡುವಾಗ ತುಲನೆ ಮಾಡದ ಕುಮಾರಸ್ವಾಮಿ ಈಗ ತುಲನೆ ಮಾಡುತ್ತಿರುವುದು ವಿಷಾದನೀಯ.
ಅಧಿಕಾರ ಹಂಚಿಕೆ ಮಾಡುವಾಗ ಪ್ರಥಮ 20 ತಿಂಗಳ ಅವಧಿಯ ನಂತರ ಬಿಜೆಪಿಗೆ ಅಧಿಕಾರ ನೀಡದ ಕುಮಾರಸ್ವಾಮಿಯ ಜಾತ್ಯಾತೀತತೆ ಯಿಂದಾಗಿ ಮುಂದಿನ ಪೂರ್ಣ ಅವಧಿಗೆ ಕೋಮುವಾದಿಗಳನ್ನು ಅಧಿಕಾರಕ್ಕೆ ಏರಲು ಕಾರಣರಾದರು . ಅದೇ ಕುಮಾರಸ್ವಾಮಿ ಇಂದು ಜಾತ್ಯತೀತೆಯ ಮುಖವಾಡ ಇಟ್ಟು ಬಿಜಿಪಿಯ ವಕ್ತಾರರು ಮಾತನಾಡಿದಂತೆ ಜೆಡಿಎಸ್ ಪಕ್ಷವು ಮುಸ್ಲಿಮರನ್ನು ಅವಲಂಬಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕುಮಾರ ಸ್ವಾಮಿ ಹಾಲಿ ತನ್ನ ಇರುವ ಪೋಷಾಕು ಬದಲಿಸಿ ಆರ್.ಎಸ್.ಎಸ್. ಪೋಷಾಕು ಧರಿಸಲಿ.
ಪಕ್ಷದ ಪ್ರಮುಖ ನಾಯಕರಾದ ಬಿ.ಎಂ ಫಾರೂಕ್ ರವರು ಈ ಹಿಂದಿನ ಮೈತ್ರಿ ಸರಕಾರದಲ್ಲಿ ಮುಸ್ಲಿಮರಿಗೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಹೇಳಿದ್ದಾರೆ . ಅಂದು ಅಧಿಕಾರ ಹಂಚಿಕೆ ಮಾಡಿದ ಕುಮಾರಸ್ವಾಮಿ ಇಂದು ಚುನಾವಣಾ ಮೈತ್ರಿ ಮಾಡಿದ್ದಾರೆ. ಮುಸ್ಲಿಮ್ ಮತಗಳಿಂದ ಸುದೃಢ ಗೊಂಡಿದ್ದ ಜೆಡಿಎಸ್ ಪಕ್ಷವನ್ನು ಇಂದು ಕುಮಾರ ಸ್ವಾಮಿ ಬಿಜೆಪಿಗೆ ಧಾರೆ ಎರೆಯುತ್ತಿದ್ದಾರೆ. ಅಂದು ಮೈತ್ರಿ ಸಮಯದಲ್ಲಿ ಬಿ.ಎಂ.ಫಾರೂಕ್ ಎಲ್ಲೋ ಇದ್ದರು. ಅಂದಿನ ಜನ ಸಾಮಾನ್ಯರ ಭವಣೆ ಅವರಿಗೇನು ಗೊತ್ತಿತ್ತು. ಬೀ.ಎಂ. ಫಾರೂಕ್ ಕೂಡಾ ತಮ್ಮ ಪೋಷಾಕು ಬದಲಿಸುವ ಕಾಲ ದೂರವಿಲ್ಲ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.