(www.vknews.in) ಬಂಟ್ವಾಳ : ನುಸ್ರತ್ ಮಿಲಾದುನ್ನಬಿ ಸಂಘ (ರಿ ) ಶಾಂತಿಅಂಗಡಿ. ಬಿ. ಸಿ. ರೋಡ್ ಇದರ ವತಿಯಿಂದ ಮಿಲಾದುನ್ನಬಿ ಪ್ರಯುಕ್ತ ನಡೆಯುವ 30 ನೇ ವರ್ಷದ ಮತಪ್ರಭಾಷಣ ಹಾಗೂ ಮಿತ್ತಬೈಲ್ ಜಮಾಅತ್ ಗೆ ಒಳಪಟ್ಟ ಮದರಸ ವಿದ್ಯಾರ್ಥಿ ಗಳ ಪ್ರತಿಭಾ ಸ್ಪರ್ದಾ ಕಾರ್ಯಕ್ರಮವು ಸಂಘ ದ ಅಧ್ಯಕ್ಷರಾದ ಇಸ್ಮಾ ಯಿಲ್ ಶಾಂತಿ ಅಂಗಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಎಂ.ಜೆ. ಎಂ ಇದರ ಮುದರ್ರಿಸ್ಸರಾದ ಉಮರ್ ಫಾರೂಕ್ ಫೈಝಿ ಪೈ ವಳಿಕೆ ದುವಾದೊಂದಿಗೆ, ಕೆ. ಪಿ. ಇರ್ಷಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್ ಉದ್ಘಾಟಿಸಿದರು.
ಮತ ಪ್ರಭಾಷಣ ವನ್ನು ಹಾಜಿ ವೈ. ಎಂ. ಅಶ್ರಫ್ ಫೈಝಿ ಕೊಡಗು,ಅಬ್ಬಾಸ್ ದಾರಿಮಿ ಫರಂಗಿಪೇಟೆ ನಡೆಸಿದರು. ವೇದಿಕೆ ಯಲ್ಲಿಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಸಯ್ಯದ್ ಫಳುಲು ತಂಗಳ್, ಸಂಘದ ಗೌರವಾಧ್ಯಕ್ಷರಾದ ಮುಹಮ್ಮದ್ ಮಜಲು. ಅಕ್ಬರ್ ಆಲಿ ಪೊನ್ನೋಡಿ, ಅಶ್ರಫ್ ಶಾಂತಿಅಂಗಡಿ, ಹಾಗೂ ಎಂಜೆ ಎಂ ಮಸೀದಿ ಒಳಪಟ್ಟ ಎಲ್ಲಾ ಮದರಸ, ಮಸೀದಿ ಯ ಅಧ್ಯಾಪಕರು ಭಾಗವಹಿಸಿದ್ದರು. ಎಂಜೆಎಂ ಮದರಸದ ಸದರ್ ಉಸ್ತಾದ್ ಕೆ. ಎಂ. ಇಬ್ರಾಹಿಂ ದಾರಿಮಿ ಸ್ವಾಗತಿಸಿ, ಬಶೀರ್ ಮಜಲು ಧನ್ಯವಾದ ವಿತ್ತರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.