(www.vknews.in) ; ಮಂಗಳೂರು ಕಣ್ಣೂರಿನಲ್ಲಿ ನಡೆದಂತಹ ಎನ್ ಆರ್ ಸಿ, ಸಿ ಎ ಎ (NRC, CAA) ಪ್ರತಿಭಟನೆ ಸಂದರ್ಭದಲ್ಲಿ ಮಹೇಶ್ ಬಸ್ಸಿನ ಮೇಲೆ ರಾಷ್ಟ್ರೀಯ ನಾಯಕರ ಹಾಗೂ ರಾಜ್ಯ ನಾಯಕರ ವಿರುದ್ಧ ಅದೇ ರೀತಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ಮಾಡಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದರ ವಿರುದ್ಧ ಕಂಕನಾಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಉಸ್ಮಾನ್ ಮತ್ತು ಸಿರಾಜ್ ಎಂಬುವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಇದರ ತನಿಖೆಯನ್ನು ಕೈಗೊಂಡ ಮಂಗಳೂರಿನ ಏಳನೇ ಜೆ ಎಂ ಎಫ್ ಸಿ ನ್ಯಾಯಾಲಯ ನ್ಯಾಯಾಧೀಶರಾದ H. J ಶಿಲ್ಪಾ ಆರೋಪಿತರ ವಿರುದ್ಧ ದೋಷಾರೋಪಣವನ್ನು ಸಾಬೀತುಪಡಿಸಲು ಪ್ರೊಸುಕ್ಯುಷನ್ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿತರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ . ಆರೋಪಿತರ ಪರ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರ್ ಇದರ ವಕೀಲರಾದಂತಹ ಓಮರ್ ಫಾರೂಕ್ ಮುಲ್ಕಿ, ಐ.ಎಂ ಇಝಜ್ ಅಹ್ಮದ್ ಉಳ್ಳಾಲ, ಹೈದರ್ ಅಲಿ ಕಿನ್ನಿಗೋಳಿ, ತೌಸಿಫ್ ಸಚರಿಪೇಟೆ ಇವರುಗಳು ವಾದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.