ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಸೋಮವಾರದಂದು ಶವ್ವಾಲ್ನ ಚಂದ್ರದರ್ಶನವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಚಂದ್ರದರ್ಶನವನ್ನು ವೀಕ್ಷಿಸುವಂತೆಯೂ, ಯಾರಿಗಾದರೂ ಚಂದ್ರನು ಗೋಚರಿಸಿದಲ್ಲಿ ಸಮೀಪದ ನ್ಯಾಯಾಲಯಕ್ಕೆ ತಿಳಿಸುವಂತೆಯೂ ಸುಪ್ರೀಂ ಕೋರ್ಟ್ ಕರೆ ನೀಡಿದೆ. ಸೋಮವಾರ ರಂಝಾನ್ 29 ಆಗಿದ್ದು, ಅಂದು ಚಂದ್ರದರ್ಶನವಾಗುವ ಕುರಿತು ಖಗೋಳ ವೀಕ್ಷಕರಲ್ಲಿಯೇ ವಿಭಿನ್ನ ಅಭಿಪ್ರಾಯಗಳಿವೆ.
ರಾಷ್ಟ್ರೀಯ ಹವಾಮಾನ ಕೇಂದ್ರದ ಅಧಿಕೃತ ವಕ್ತಾರ ಹುಸೇನ್ ಅಲ್ ಕಹ್ತಾನಿ, ಸೌದಿ ಅರೇಬಿಯಾದ ಉತ್ತರ ಮತ್ತು ಪಶ್ಚಿಮದಲ್ಲಿನ ಹವಾಮಾನ ಪರಿಸ್ಥಿತಿಗಳು ಇಂದು ಚಂದ್ರದರ್ಶನ ವೀಕ್ಷಿಸಲು ಸೂಕ್ತವಾಗುತ್ತವೆ ಎಂದು ಖಚಿತಪಡಿಸಿದ್ದಾರೆ.
ಅದೇ ವೇಳೆಗೆ ಇಂದು ಚಂದ್ರದರ್ಶನದ ಸಾಧ್ಯಕೆಯಿಲ್ಲ, ಹೀಗಾಗಿ 30ರ ರಂಜಾನ್ ಮುಗಿದು ಈದ್ ಹಬ್ಬ ಬುಧವಾರ ನಡೆಯಲಿದೆ ಎನ್ನುತ್ತಾರೆ ಗೋಳ ಶಾಸ್ತ್ರ ವೀಕ್ಷಕರು.
ಇಂದು ಸೂರ್ಯಾಸ್ತಕ್ಕೂ ಮುನ್ನ ಚಂದ್ರ ಅಸ್ತಮಿಸಲಿದ್ದು ನೈಸರ್ಗಿಕವಾಗಿ ಚಂದ್ರ ಗೋಚರವಾಗದ ಕಾರಣ ಈದ್ ಹಬ್ಬ ಏಪ್ರಿಲ್ 10ರ ಬುಧವಾರದಂದು ಎಂದು ವನ ವೀಕ್ಷಕ ಡಾ.ಅಬ್ದುಲ್ಲಾ ಮಿಸ್ನಾದ್ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.