(www.vknews. in) ; ಪೋಲಿಸ್ ಇಲಾಖೆಯಲ್ಲಿ ತನಗೆ ಲಭಿಸಿದ ಹುದ್ದೆ ಅದೊಂದು ವರದಾನ ಎಂಬಂತೆ ಭಾವಿಸಿಕೊಂಡು ಆ ಮೂಲಕ ಜನ ಸೇವೆ ಮಾಡುವ ಕಾರ್ಯದಲ್ಲಿ ತೃಪ್ತಿ ಕಂಡ ಕೆಲವೇ ಮಂದಿ ಪ್ರಾಮಾಣಿಕ ಪೊಲೀಸ್ ಉನ್ನತಾಧಿಕಾರಿಗಳಲ್ಲಿ ಇದೀಗ ಪಶ್ಚಿಮ ವಲಯದಲ್ಲಿ ಕಾರ್ಯವೆಸಗುವ ಡಾ| ಎಂ. ಬಿ. ಬೋರಲಿಂಗಯ್ಯ IPS ಒಬ್ಬರಾಗಿದ್ದಾರೆ. ಸರಕಾರ ತನಗೆ ಕೆಲಸ ಕೊಟ್ಟಿದೆ ಸಂಬಳ ಕೊಡುತ್ತಾ ಇದೆ ಅದಕ್ಕಾಗಿ ಕೆಲಸ ಮಾಡಬೇಕು ಎಂಬ ನೀತಿ ಪೊಲೀಸ್ ಅಧಿಕಾರಿಗಳಲ್ಲಿ ಹೆಚ್ಚಿನವರಲ್ಲಿ ಇರುವಂತಹದು. ಆದರೆ ಶ್ರೀ ಬೋರಲಿಂಗಯ್ಯ ಇದಕ್ಕೆ ಅಪವಾದವಾಗಿದ್ದಾರೆ. ಸರಕಾರ ತನಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಸಮರ್ಥ ವಾಗಿಯೂ, ಪ್ರಾಮಾಣಿಕ ವಾಗಿಯೂ ನಿರ್ವಹಿಸಿ ಜನ ಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಿಕೊಂಡು ದೇಶ ಸೇವೆ ಮಾಡಬೇಕೆಂಬ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿರುವ ಶ್ರೀ ಎಂ.ಬಿ. ಬೋರಲಿಂಗಯ್ಯ ಇದೀಗ ಪಶ್ಚಿಮ ವಲಯದ IGP ಯಾಗಿ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕನಾ೯ಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ದುಷ್ಟರಿಗೂ, ಭ್ರಷ್ಟ ರಿಗೂ ಸಿಂಹ ಸ್ವಪ್ನವಾಗಿ ಪರಿಣಮಿಸಿದ ಶ್ರೀ ಬೋರಲಿಂಗಯ್ಯ ಮೂಲತಃ ಮಂಡ್ಯ ಜಿಲ್ಲೆಯವರು. 2008ನೇ ಬ್ಯಾಚಿನ IPS ಅಧಿಕಾರಿಗಳಾದ ಶ್ರೀ ಬೋರಲಿಂಗಯ್ಯ ತಾನು ಸೇವೆ ಸಲ್ಲಿಸಿದ ರಾಜ್ಯದ ಮೈಸೂರು, ಉಡುಪಿ ಸಹಿತ ಎಲ್ಲಾ ಸ್ಥಳ ಗಳಲ್ಲೂ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಿದ್ದಾರೆ. ಎಲ್ಲೆಲ್ಲಾ ಕೋಮು ಗಲಭೆಯಾಗಿದೆಯೋ, ಎಲ್ಲೆಲ್ಲಾ ಗುಂಪು ಗಲಭೆಯಾಗಿದೆಯೋ ಅಲ್ಲೆಲ್ಲಾ ಸರಕಾರವು ತಕ್ಷಣ ಬೋರಲಿಂಗಯ್ಯ ರವರನ್ನು ಕಳುಹಿಸಿ ಅಲ್ಲಿ ಶಾಂತಿ ಸುವ್ಯವಸ್ಥೆಯನ್ನು ನೆಲೆಗೊಳಿಸುವಲ್ಲಿ ಯಶಸ್ಸುಯಾಗುತ್ತಿತ್ತು. ಕರ್ತವ್ಯ ವೇ ತನ್ನ ಪರಮ ಧರ್ಮ ಎಂಬ ದೃಢ ವಿಶ್ವಾಸದಿಂದ ನಾಡಿನ ಹಿತಕ್ಕಾಗಿ ದುಡಿಯುತ್ತಿರುವ ಶ್ರೀ ಬೋರಲಿಂಗಯ್ಯ ನಿಸ್ವಾರ್ಥ ಸೇವೆಯಲ್ಲಿ ತೃಪ್ತಿ ಕಂಡ ಪ್ರಾಮಾಣಿಕ ಅಧಿಕಾರಿ ಯಾಗಿದ್ದಾರೆ. ಮಾತ್ರವಲ್ಲ ನಿಷ್ಠೆ ಪ್ರಾಮಾಣಿಕತೆಯಿಂದ ದುಡಿದು ಇಲಾಖೆಗೆ ತಂದ ಶಾಂತಿ ಸುವ್ಯವಸ್ಥೆ ಸಂಕೇತವಾಗಿದ್ದಾರೆ.
ಅಹಂಭಾವದ ಅರಿವಿಲ್ಲದ ಶ್ರೀಯುತ DIG ಬೋರಲಿಂಗಯ್ಯ ತನ್ನ ಪ್ರಾಮಾಣಿಕ ಕಾರ್ಯ ದಕ್ಷತೆ ಗಳಿಂದ ಜನತೆ ಮತ್ತು ಸರಕಾರ ದ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಶ್ರೀಯುತ ಬೋರಲಿಂಗಯ್ಯ ರವರ ಪ್ರಾಮಾಣಿಕತೆ, ದಕ್ಷತೆ ಮತ್ತು ಕರ್ತವ್ಯ ಶೀಲತೆಯನ್ನು ಗಮನಿಸಿ ಸರಕಾರವು ಅವರಿಗೆ ಭಡ್ತಿ ನೀಡಿ ಗೌರವಿಸ ಬೇಕಾದ ಅಗತ್ಯ ವಿದೆ.
ಶೇಕ್ ಇಸಾಕ್ ಸಂಪಾದಕರು-ಕಾಕೋ೯ಟಕ ಸಾಪ್ತಾಹಿಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.