(www.vknews.in) : ವಿಶ್ವ ಕನ್ನಡಿಗ ನ್ಯೂಸ್ ತನ್ನ ಪ್ರಾಮಾಣಿಕ ಸೇವಾ ಹಾದಿಯಲ್ಲಿ ಯಶಸ್ವೀ ಹದಿನಾಲ್ಕು ವರ್ಷಗಳನ್ನು ಪೂರೈಸಿದೆ. ಇದು ಕನ್ನಡಿಗರು ಅಭಿಮಾನ ಪಡುವ ಸಂಗತಿ. ಸಮಸ್ತ ಕನ್ನಡಿಗರ ಧ್ವನಿಯಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡುತ್ತಾ ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿದ ವಿಶ್ವ ಕನ್ನಡಿಗ ನ್ಯೂಸ್ ಸತ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ವಸ್ತುನಿಷ್ಠ ಸುದ್ದಿ ನಿರೂಪಣೆ ಮೂಲಕ ಜಗತ್ತಿನಾದ್ಯಂತವಿರುವ ಕನ್ನಡಿಗರ ಮನ ಗೆದ್ದಿದೆ.
ವಿಕೆ ನ್ಯೂಸ್ ಸಂಪಾದಕರು ಹಾಗೂ ಮಾದರಿ ಪತ್ರಿಕಾ ಮಂಡಳಿಯ ನಿಷ್ಕಳಂಕ ಸೇವೆಯಿಂದಲೇ ಹದಿನಾಲ್ಕು ವರ್ಷಗಳನ್ನು ನಿರಾತಂಕವಾಗಿ ಪೂರೈಸಲು ಸಾದ್ಯವಾಗಿದೆ. ಸಕಾಲಿಕ ಬರಹಗಳು, ಅಪೂರ್ವ ಮಾಹಿತಿ, ವಿವಿಧ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಗಳಿಂದಲೇ ಓದುಗರ ಹೃದಯದಲ್ಲಿ ಸ್ಥಾನ ಹಿಡಿದು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಜೈತ್ರಯಾತ್ರೆ ನಡೆಸುತ್ತಿದೆ.
ವಿಕೆ ನ್ಯೂಸ್ ನ ಮುಂದಿನ ಹಾದಿ ಇನ್ನಷ್ಟು ವರ್ಣರಂಜಿತವಾಗಲಿ. ಮಾಧ್ಯಮ ಕ್ಷೇತ್ರದ ಪ್ರಜ್ವಲ ತಾರೆಯಾಗಿ ಕಂಗೊಳಿಸಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತಿದ್ದೇನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.