(www.vknews. in) ; ಇತ್ತೀಚೆಗೆ ರಚನೆಯಾದ ನರೇಂದ್ರಮೋದಿಯವರ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಸುಮುದಾಯದ ಯಾವೊಬ್ಬ ಸದಸ್ಯರನ್ನು ಮಂತ್ರಿ ಮಾಡದೆ ಘೋರ ಅನ್ಯಾಯವೆಸಗಲಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಟೀಕಿಸಿದ್ದಾರೆ.
ದೇಶದ ಬಹುದೊಡ್ದ ಸಮುದಾಯವನ್ನು ಹೊಂದಿರುವ ಮತ್ತು 30 ಕೋಟಿಯಷ್ಟು ಮುಸಲ್ಮಾನರು ಇರುವ ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಮಂತ್ರಿಸ್ಥಾನ ನೀಡದೆ ಇರುವುದು ಪ್ರಜಾಪ್ರಭುತ್ವಕ್ಕೆ ಮತ್ತು ಜಾತ್ಯತೀತ ಭಾರತ ಜನತೆಗೆ ಮಾಡಿದ ದ್ರೋಹ ಆಗಿದೆ. ಎಂದು ಟಿ.ಎಂ ಶಹೀದ್ ತೆಕ್ಕಿಲ್ ಅಸಮದಾನ ವ್ಯಕ್ತಪಡಿಸಿದರು.ಮೋದಿಯವರ ಬಣ್ಣದ ಮಾತುಗಳು ಇನ್ನುಮುಂದೆ ನಡೆಯಲ್ಲ ಎಂದು ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವಿರೋಧಿ ನಡೆಯನ್ನು ಟೀಕಿಸಿದರು
ಲೋಕ ಸಭಾ ಚುನಾವಣೆಯ ನಂತರ ರಾಜ್ಯದ ಕೆಲವು ಸಚಿವರುಗಳು ಪಕ್ಷದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅಸಮದಾನ ವ್ಯಕ್ತ ಪಡಿಸಿದರು. ಯಾವುದೆ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ವಿನಃ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದೆಂದು ವಿನಂತಿಸಿದ ಅವರು ಸಚಿವರು ತಮ್ಮ ಖಾತೆಗಳ ಬಗ್ಗೆ ಮಾತ್ರ ಪತ್ರಕರ್ತರಲ್ಲಿ ಮಾತನಾಡಿ ಹೇಳಿದರು. ಪಕ್ಷದ ಬಗ್ಗೆ ಹೇಳಿಕೆಗಳನ್ನು ನೀಡಲು ಮಾನ್ಯ ಮುಖ್ಯ ಮಂತ್ರಿಗಳು, ಮಾನ್ಯ ಕೆ.ಪಿ.ಸಿ.ಸಿ ಅಧ್ಯಕ್ಷರು, ಹೈಕಮಾಂಡ್ ಇದೆ ಎಂದು ಪಕ್ಷದಲ್ಲಿ ನೈಜ ಕಾರ್ಯಕರ್ತರಿಗೆ ನೋವಾಗದ ರೀತಿಯಲ್ಲಿ ಸಚಿವರು ನಡೆಕೊಳ್ಳಬೇಕೆಂದು ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮವನ್ನು ಮರೆಯಬಾರದೆಂದು ಸಚಿವರ ಶಾಸಕರ ಗಮನ ಸೆಳೆಯುತ್ತೇನೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.