ಮಂಗಳೂರು (www.vknews.in) : ಬಿಜೆಪಿ ವಿಧಾನ ಪರಿಷತ್ ಸದಸ್ಯ ರಾದ ಸಿ.ಟಿ. ರವಿಯವರು,ಇತ್ತೀಚೆಗಿನ ಬೋಳಿಯಾರು ಸಂಭ್ರಮಾಚರಣೆ ವೇಳೆಯಲ್ಲಿನ ಬಿಜೆಪಿ ಕಾರ್ಯಕರ್ತರ ಪಾಕಿಸ್ತಾನಿ….. ಗಳೇ ಘೋಷಣೆ ನೈಜ ಭಾರತೀಯರನ್ನು ಬೇಸರ ಗೊಳಿಸಿಲ್ಲ ಎಂದು ಸಮರ್ಥಿಸಿ ಕೊಂಡಿದ್ದಾರೆ. ಪತ್ರಿಕಾ ಗೋಷ್ಟಿ ನಡೆಸಿದ ಸಿ.ಟಿ.ರವಿ ಯವರು ನಗರ ಪೊಲೀಸ್ ಆಯುಕ್ತರ ಹೇಳಿಕೆಯನ್ನು ಕೂಡಾ ವಿಮರ್ಶಿಸಿ,ಪೋಲೀಸು ಆಯುಕ್ತರ ಹೇಳಿಕೆ, ಇರಿತಕ್ಕೆ ಕಾರಣ ಪ್ರಚೋದನಾತ್ಮಕ ಘೋಷಣೆ ಎಂಬುದನ್ನು ವಿಮರ್ಶೆಸಿದ್ದಾರೆ.
ಸಿ.ಟಿ. ರವಿಯವರು ಹೇಳಲಿ, ವಿಜಯೋತ್ಸವದ ಸಂಧರ್ಭದಲ್ಲಿ ಪ್ರಾರ್ಥನಲಯದ ಎದುರಿಗೆ ಪಾಕಿಸ್ತಾನಿ…. ಪದಬಳಕೆಗೆ ತಾವು ತಮ್ಮ ಪಕ್ಷದ ಕಾರ್ಯಕರ್ತರಿಗೆ ಪೂರ್ವ ತರಭೇತಿ ನೀಡಿದ್ದರ ಪರಿಣಾಮವೇ?. ಹಾಗಿದ್ದಲ್ಲಿ ಬಿಜೆಪಿ ಕಾರ್ಯಕರ್ತರು ಗಲಭೆ ಸೃಷ್ಟಿಸುವ ಹುನ್ನಾರ ದಿಂದಲೇ, ಅನುಮತಿ ರಹಿತ ಸಂಭ್ರಮಾಚರಣೆ ಮೆರವಣಿಗೆ ನಡೆಸಿದ್ದಾರೆಯೇ? ಎಂದು ಹೇಳಲಿ. ಸಿ.ಟಿ. ರವಿಯವರು ಈ ಹಿಂದಿನ ಸಂಸದರು ಪ್ರಯತ್ನಿಸಿದಂತೆ ಜಿಲ್ಲೆಯಲ್ಲಿ ಬೆಂಕಿ ಗಲಭೆಗೆ ತಯಾರಿ ನಡೆಸಿದ್ದರೆ ಎಂದು ಕೂಡಾ ಹೇಳಲಿ. ಶಾಸಕ ಹರೀಶ್ ಪೂಂಜಾರಿಗೆ ತಲವಾರು ಪದ ಬಾಯಿ ಪಾಠ ಇದ್ದರೆ, ಸಿ.ಟಿ.ರವಿಗೆ ಪಾಕಿಸ್ತಾನ ಪದ ಬಾಯಿ ಪಾಠ ಇದ್ದೇ ಇದೆ!.ಅದನ್ನು ಇಂದು ಓದರಿದ್ದಾರೆ. ಜಿಲ್ಲೆಯ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇದೆ ಎಂದು ಹೇಳಿಕೆ ನೀಡುವ ಬಿಜೆಪಿ ನಾಯಕರು ಜಿಲ್ಲೆಯಲ್ಲಿ ವಿವಿಧ ಜಾತಿಗಳ ಮದ್ಯೆ ಕಲಹ ಸೃಷ್ಟಿಸುವ ಪ್ರಯತ್ನ ವನ್ನು ಇನ್ನಾದರೂ ಕೈ ಬಿಡಲಿ.
ಜಿಲ್ಲೆಯ ಬಿಜೆಪಿ ನಾಯಕರು ಅರಿಯಲಿ, ದೇಶದ ಯಾವ ಮಸೀದಿಯಲ್ಲಿ ಶಸ್ತ್ರಾಸ್ತ್ರವೂ ಇಲ್ಲ, ಜನರನ್ನು ಭೇದಗೊಳಿಸುವ ಧಾರ್ಮಿಕ ಮೀಸಲಾತಿಯು ಇಲ್ಲ, ಇಂತಹ ಮೀಸಲಾತಿ ಇತರ ಧರ್ಮದಲ್ಲಿ ಅಸ್ತಿತ್ವದಲ್ಲಿ ಇದ್ದರೆ ಸಿ.ಟಿ. ರವಿಯವರು ಇಂದೇ ಅಂತಹ ಭೇದವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಲಿ. ಹರೀಶ್ ಪೂಂಜಾರನ್ನು ಈ ಹಿಂದೆ ಪಲ್ಲಕ್ಕಿ ಸ್ಪರ್ಷಿಸಿದ್ದಕ್ಕಾಗಿ ಹೊರಗೆ ಇಟ್ಟ ವ್ಯವಸ್ಥೆ ಮಸೀದಿ ಅಲ್ಲ ಎಂಬುದನ್ನು ಮರೆಯದಿರಲಿ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.