(www.vknews. in) ; ಹೆಬ್ರಿ ತಾಲ್ಲೂಕಿನ ಎಸ್ಎಸ್ ಎಲ್ಸಿ ಸನ್ಮಾನ, ಹೆಬ್ರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ಎಸ್ಎಸ್ ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿರುವ ಹೆಬ್ರಿ ಮಠದಬೆಟ್ಟು ಶಿಫಾ ಅವರನ್ನು ಮಂಗಳವಾರ ನಮ್ಮ ನಾಡ ಒಕ್ಕೂಟ (ರಿ) ಹೆಬ್ರಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದಿಂದ ಅತ್ಯುತ್ತಮ ಶೈಕ್ಷಣಿಕ ಸಾಧಕಿ ಶಿಫಾ ಅವರಿಗೆ ಸನ್ಮಾನ ನಮ್ಮ ನಾಡ ಒಕ್ಕೂಟದಿಂದ ಸಾಧನೆ ಮಾಡುವವರಿಗೆ ಸದಾಕಾಲವೂ ನೆರವು : ಅಬ್ದುಲ್ ಶುಕುರ್ ಬೆಳ್ವೆ ಹೆಬ್ರಿ : 2023- 24ನೆ ಯ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿ ಶಿಫಾ 625 ರಲ್ಲಿ 612ಅಂಕ ( ಶೇ.97.92% ) ಪಡೆದು ಹೆಬ್ರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಮಾಡಿರುವ ಸಾಧನೆ ಅಪೂರ್ವವಾಗಿದೆ. ಸಮಾಜಕ್ಕೆ ಮತ್ತು ಹೆಬ್ರಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ನಮ್ಮ ನಾಡ ಒಕ್ಕೂಟ ಶಿಫಾ ಅವರ ಶೈಕ್ಷಣಿಕ ಜೀವನಕ್ಕೆ ನಿರಂತರ ಸಹಾಯ ಮಾಡಲಿದೆ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಹೇಳಿದರು.
ಅವರು ಹೆಬ್ರಿ ಮಠದಬೆಟ್ಟು ನಿವಾಸದಲ್ಲಿ ಮಂಗಳವಾರ ನಮ್ಮ ನಾಡ ಒಕ್ಕೂಟ (ರಿ) ಹೆಬ್ರಿ ಘಟಕದ ವತಿಯಿಂದ ಅತ್ಯುತ್ತಮ ಶೈಕ್ಷಣಿಕ ಸಾಧಕಿ ಶಿಫಾ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಸಮುದಾಯದ ಮಕ್ಕಳ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ನಮ್ಮ ನಾಡ ಒಕ್ಕೂಟ ಜಿಲ್ಲೆಯಾದ್ಯಂತ ಸಹಾಯ ಮಾಡುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಮಾಹಿತಿ ಶಿಬಿರವನ್ನು ಸಕಾಲ ಮಾಡುತ್ತ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಅಬ್ದುಲ್ ಶುಕುರ್ ಬೆಳ್ವೆ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಿಫಾ ಕಲಿತು ಇನ್ನಷ್ಟು ಸಾಧನೆ ಮಾಡಿ ಸರ್ಕಾರದ ಉನ್ನತ ಅಧಿಕಾರಿಯಾಗಬೇಕು ಎಂಬ ಹಂಬಲವಿದೆ. ಆ ಮೂಲಕ ದೇಶ ಸಮಾಜದ ಮತ್ತು ಜನರ ಸೇವೆ ಮಾಡುವ ಇಚ್ಚೆ ಇದೆ. ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆ ಮಾಡಿದ ಹೆಮ್ಮೆ ಇದೆ. ನನಗೆ ಸಹಾಯ ಮಾರ್ಗದರ್ಶನ ಮಾಡಿದ ಅಪ್ಪ ಅಮ್ಮ, ಪೋಷಕರು, ಗುರುವೃಂದ ಹಾಗೂ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ವಿಧ್ಯಾರ್ಥಿ ತಂದೆತಾಯಿ ಹೆಬ್ರಿ ಮಠದ ಬೆಟ್ಟಿನ ಅನ್ವರ್ ರಪೀ ಹಾಗೂ ಆಯಿಶಾ ಬಾನು ಕೃತಜ್ಞತೆ ಸಲ್ಲಿಸಿದರು.
ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲ್, ಪ್ರಶಸ್ತಿ ಪುರಸ್ಕೃತ ಪತ್ರಕರ್ತ ನರೇಂದ್ರ ಎಸ್ ಮರಸಣಿಗೆ, ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕದ ಕೋಶಾಧಿಕಾರಿ ಅಬ್ದುಲ್ ಅಝೀಝ್ ಮುನಿಯಾಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರಾಫತ್ ಅಲ್ಬಾಡಿ, ಜಿಲ್ಲಾ ಸಮಿತಿ ಸದಸ್ಯ ಮೊಹಮ್ಮದ್ ರಯನ್, ಹೆಬ್ರಿ ಘಟಕದ ಸದಸ್ಯ ಜಿಫ್ರಿ ಸಾಹೇಬ್ ಬೆಳ್ವೆ, ಸ್ಥಳೀಯರಾದ ಮುಸ್ತಾಫಾ, ಹಸನಬ್ಬ ಮೊದಲಾದವರು ಉಪಸ್ಥಿರಿದ್ದರು. ರಯನ್ ಕಿರಾತ ಪಠಿಸಿದರು, ಫಾರಿಸ್ ಸ್ವಾಗತಿಸಿದರು, ಜಾಸಿಮ್ ವಂದಿಸಿದರು ಅರಾಫತ್ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.