(www.vknews. in) ; ಪುತ್ತೂರು ತಾಲೂಕಿನ ಶಿಕ್ಷಣಾಧಿಕಾರಿ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚೇರು ವನ್ನು 10 ಮಕ್ಕಳು ಇದ್ದೂ ಕೂಡ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮುಚ್ಚಿಸುವ ಷಡ್ಯಂತ್ರವನ್ನು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಬಯಲಿಗೆಳೆದು ,ಶಾಲೆಯನ್ನ ಪುನಃ ತೆರೆಯಿಸಿದ ಘಟನೆ ಕೂಡ ನಡೆದಿದೆ.
ಚೇರು ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 12 ಮಕ್ಕಳಿದ್ದು ಸರಕಾರದ ಖಾಯಂ ಶಿಕ್ಷಕರು ಇಲ್ಲದೆ ಎರಡು ಅತಿಥಿ ಶಿಕ್ಷಕರಿಂದ ಶಾಲೆ ನಡೆಯುತ್ತಾ ಇತ್ತು, ಅದಲ್ಲದೆ ದಾಖಲೆ ನಿರ್ವಹಿಸಲು ಹತ್ತಿರದ ಸರಕಾರಿ ಶಾಲೆಯ ಶಿಕ್ಷಕನನ್ನು ನಿಯೋಜನೆ ಮಾಡಿತ್ತು. ಆದರೆ ಸಾರ್ವಜನಿಕರಿಗೆ ,ಪೋಷಕರಿಗೆ ಶಾಲೆಯಿಂದ ಯಾವುದೇ ದಾಖಲೆಗಳು ಬೇಕಿದ್ದರೆ ಖಾಯಂ ಶಿಕ್ಷಕರು ಇಲ್ಲದೆ ಇರುವ ಕಾರಣ ತೊಂದರೆ ಆಗುತ್ತಾ ಇತ್ತು.ಹಾಗೂ ನಿಯೋಜನೆ ಮಾಡಿದ ಶಿಕ್ಷಕ ಬಂದು ಹೋಗುವ ಸಮಯವೇ ಯಾರಿಗೂ ಗೊತ್ತಾಗುತ್ತಾ ಇರಲಿಲ್ಲ ಹಾಗೂ ಅತಿಥಿ ಶಿಕ್ಷಕರಿಗೂ ಮಾಹಿತಿ ಇರುತ್ತಿರಲಿಲ್ಲ.
ಇದರಿಂದ ಬೇಸತ್ತ ಪೋಷಕರು ಕಳೆದ ಶೈಕ್ಷಣಿಕ ವರ್ಷವೇ ಶಿಕ್ಷಣಾಧಿಕಾರಿ, ಉಪನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಮನವಿಯನ್ನು ಕೊಟ್ಟು ನಕ್ಸಲ್ ಬಾಧಿತ ಪ್ರದೇಶದ ಬಡ ಮಕ್ಕಳಿಗೆ ಕಲಿಕೆಗೆ ಪೂರಕವಾಗಿ ಇರುವಂತಹ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಖಾಯಂ(ನಿಯೋಜನೆ) ಆಗಿ ಒಂದು ಶಿಕ್ಷಕರನ್ನು ಶಾಲೆಗೆ ನಿಯೋಜನೆ ಮಾಡಲು ಕೇಳಿ ಕೊಳ್ಳಲಾಗಿತ್ತು.
ಆದರೆ ಈ ಶೈಕ್ಷಣಿಕ ವರ್ಷ ಪ್ರಾರಂಭವಾದರೂ ಇಲಾಖೆಯು ಇದರ ಬಗ್ಗೆ ಗಮನಕೊಡದೆ ಹಾಗೂ ಹತ್ತಿರದ ಶಾಲೆಯಿಂದ ನಿಯೋಜಿತ ರಾಗಿದ್ದ ಶಿಕ್ಷಕರು ಕೂಡ ಸರಿಯಾಗಿ ಕರ್ತವ್ಯವನ್ನು ನಿಭಾಯಿಸದೆ ಇದ್ದ ಕಾರಣ ಹಾಗೂ ಸಾರ್ವಜನಿಕ ವಲಯದಲ್ಲಿ ಶಾಲೆ ಮುಚ್ಚಿದೆ ಎನ್ನುವ ವಾರ್ತೆ ಪಸರಿಸಿದ ಕಾರಣ ಅಲ್ಲಿದ್ದ ಮಕ್ಕಳು ಅಲ್ಲದೆ ಅಂಗನವಾಡಿಯಲ್ಲಿ ಇದ್ದಂತಹ ಒಂದನೇ ತರಗತಿಗೆ ದಾಖಲು ಆಗಬೇಕಿದ್ದ 3 ಮಕ್ಕಳು ಕೂಡ ಹತ್ತಿರದ ಖಾಸಗಿ ಹಾಗೂ ಸರಕಾರಿ ಶಾಲೆಗೆ ಸೇರಿಸುವಂತಹ ಸಂದಿಗ್ದ ಪರಿಸ್ಥಿತಿಯನ್ನು ಉಂಟು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಈ ಶಾಲೆಯ ಜನವಸತಿ ಪ್ರದೇಶಕ್ಕೆ ಸಂಭಂದಿಸಿದವರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಗಮನಕ್ಕೆ ತಂದಾಗ ಅವರು ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದಾಗ ಈ ಶಾಲೆ ಮುಚ್ಚುವ ಬಗ್ಗೆ ಸ್ಥಳೀಯ ಶಿಕ್ಷಣಾಧಿಕಾರಿ, BRP, BRC ಅಥವಾ ಸಮೂಹ ಸಂಪನ್ಮೂಲ ವ್ಯಕ್ತಿಗಳ ಗಮನಕ್ಕೆ ಬಂದೇ ಇಲ್ಲ ಎನ್ನುವ ಮಾತುಗಳೇ ಈ ಶಾಲೆಯನ್ನು ವ್ಯವಸ್ಥಿತವಾಗಿ ಮುಚ್ಚಲು ಸಂಚು ಹೂಡಿದ್ದಾರೆ ಎನ್ನುವ ಸಂಶಯಕ್ಕೆ ಕಾರಣವಾಗಿದೆ
ಇದನ್ನು ಮನಗಂಡ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಪದಾಧಿಕಾರಿಗಳು ಸ್ಥಳೀಯ ಸಮುಚಿತ ಪ್ರಾಧಿಕಾರವಾದ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಾಗೂ ಅಭಿವೃದ್ಧಿ ಅಧಿಕಾರಿಯ ಗಮನ ಸೆಳೆದಾಗ, ನಿಯಮ ಪ್ರಕಾರ ಶಾಲೆಯಲ್ಲಿ ದಾಖಲಾತಿ ಇಲ್ಲದೆ ಇರುವ ಬಗ್ಗೆ, ಶಾಲೆ ಮುಚ್ಚುವ ಪರಿಸ್ಥಿತಿ ಬಂದಿರುವ ಬಗ್ಗೆ ಅವರ ಗಮನಕ್ಕೂ ಮುಖ್ಯ ಶಿಕ್ಷಕ ಅಥವಾ ಅದಕ್ಕೆ ಸಂಭಂದಿಸಿದವರು ಕೊಟ್ಟಿರಲಿಲ್ಲ.
ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅವರ ತಂಡ ಕೂಡಲೇ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಕೇಳಿದಾಗ ಕೂಡ ಶಾಲೆ ಮುಚ್ಚಿಲ್ಲ ಎನ್ನುವ ಉತ್ತರವನ್ನೇ ಕೊಟ್ಟಿದ್ದು, ಅದಕ್ಕೆ ತಾವು ಕೂಡಲೇ ಶಾಲೆ ಕಡೆ ಬರಬೇಕು ಹಾಗೂ ಶಾಲೆಯು ಮುಚ್ಚಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಲು ಆವಶ್ಯ ಪಟ್ಟದ್ದನ್ನು ಅನುಸರಿಸಿ ಶಿಕ್ಷಣಾಧಿಕಾರಿ ತಲುಪಿರುತ್ತಾರೆ.
ಅಂದು 3 ಗಂಟೆಗೆ ನಡೆದ ಮಾತುಕತೆಯಲ್ಲಿ ಯಾವುದೇ ಕಾರಣಕ್ಕೂ ಒಂದು ಮಗು ಶಾಲೆಯಲ್ಲಿ ದಾಖಲಾತಿ ಇದ್ದರೂ ಕೂಡ ಶಾಲೆಯನ್ನು ಮುಚ್ಚುವುದಿಲ್ಲ,ಹಾಗೂ ಪೋಷಕರ ಬೇಡಿಕೆಯಾದ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿದ ಕಾರಣ ಶಾಲೆಯಿಂದ ವರ್ಗಾವಣೆ ಪಡೆದಿದ್ದ ಕೆಲವು ಪೋಷಕರು ಸಮ್ಮತಿ ಸೂಚಿಸಿದರು,ಅದಲ್ಲದೆ ಎರಡು ದಿನದ ನಂತರ ಎಲ್ಲಾ ಪೋಷಕರನ್ನು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಸೇರಿಸಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಸಭೆಯನ್ನು ಕರೆಯುವ ತೀರ್ಮಾನದಂತೆ ಸಭೆ ಕರೆದು ಪೋಷಕರ ಮನವೊಲಿಸಿ 8 ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಶಾಲೆಯನ್ನು ಪ್ರಾರಂಭ ಮಾಡಲಾಗಿದೆ
ಈ ಶಾಲೆ ಮುಚ್ಚಲಿದೆ ಎಂದು ಪೋಷಕರಿಗೆ ಹೇಳಿದವರು ಯಾರು?
ಇಲಾಖೆಗೆ ಹಲವು ಬಾರಿ ಮನವಿ ಕೊಟ್ಟರೂ ಕೂಡ ಖಾಯಂ( ನಿಯೋಜನೆ) ಆಗಿ ಒಂದು ಶಿಕ್ಷಕರು ಬೇಕು ಎನ್ನುವ ಬೇಡಿಕೆಗೆ ಐದು ವರ್ಷದಿಂದ ಸ್ಪಂದಿಸದೇ ಇರಲು ಕಾರಣವೇನು?
ಈ ಶೈಕ್ಷಣಿಕ ವರ್ಷ 10 ಮಕ್ಕಳು ಇದ್ದರೂ ಕೂಡ ಪ್ರಾರಂಭೋತ್ಸವ ಮಾಡಿಲ್ಲ ಯಾಕೆ?
ಶಾಲೆ ಪ್ರಾರಂಭಕ್ಕೆ ಮಕ್ಕಳು ಬಂದಿಲ್ಲ ಎಂದಾದರೆ ಮನೆ ಮನೆ ಭೇಟಿ,ದಾಖಲಾತಿ ಆಂದೋಲನದಂತಹ ಕಾರ್ಯಕ್ರಮಗಳನ್ನು ಅಯೋಜಿಸದೆ ಇರಲು ಕಾರಣವೇನು?
ಶಾಲೆಗೆ ಯಾವುದೇ ಮಕ್ಕಳು ಬಂದಿಲ್ಲ ಎನ್ನುವ ವಿಷಯ ಮೇಲಾಧಿಕಾರಿ ಗಳಿಗೆ ಗೊತ್ತಿಲ್ಲದೆ ಇರಲು ಕಾರಣವೇನು?
ಶಾಲೆಯ ಇಂತಹ ಪರಿಸ್ಥಿತಿಯನ್ನು ಸ್ಥಳೀಯ ಪ್ರಾಧಿಕಾರದ ಗಮನಕ್ಕೆ ತಾರದೇ ಇರಲು ಕಾರಣವೇನು?
ಆ ಶಾಲೆಗೆ ನಿಯೋಜನೆ ಆಗಿರುವ ಶಿಕ್ಷಕ ಆ ಶಾಲೆಯಲ್ಲಿ ದಾಖಲಾತಿಗಾಗಿ ಶಾಲೆಯನ್ನು ತೆರೆದು ಇಡದೆ ಇರಲು ಕಾರಣವೇನು?
ಚೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಗೂಗಲ್ ನಲ್ಲಿ ಪರ್ಮನೆಂಟ್ ಮುಚ್ಚಿದೆ ಎಂದು ಅಪ್ಡೇಟ್ ಮಾಡಿದವರು ಯಾರು???
ಇದೆಲ್ಲವೂ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಮೂಡುವ ಪ್ರಶ್ನೆಯಾಗಿದ್ದು ಇದನ್ನು ತಾಲೂಕಿನ ಅಧಿಕಾರಿಗಳನ್ನು ದೂರ ಇಟ್ಟು ತನಿಖೆಗೆ ಒಳಪಡಿಸುವ ಆವಶ್ಯಕತೆ ಇದೆ
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯ ಗಮನಕ್ಕೆ ಬಾರದೆ ಇರುತ್ತಾ ಇದ್ದರೆ ಮುಚ್ಚಿ ಹೋದ ಸರಕಾರಿ ಶಾಲೆಗಳ ಲೆಕ್ಕದಲ್ಲಿ ಚೇರು ಶಾಲೆ ಕೂಡ ಸೇರ್ಪಡೆ ಆಗುತ್ತಾ ಇತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.