ವಿರಾಜಪೇಟೆ (www.vknews. in) : ಕೊಡಗಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಅನ್ವಾರುಲ್ ಹುದಾದಲ್ಲಿ ಪ್ರಾರಂಭ ಹಂತದಿಂದಲೇ ಕಾರ್ಯಾಚರಿಸಿಕೊಂಡು ಬರುತ್ತಿರುವ ನದ್ದತು ಸ್ಸುನ್ನಃ ಅನ್ವಾರ್ ಸ್ಟುಡೆಂಟ್ ಯೂನಿಯನ್.ಭಾನುವಾರ ಸಂಜೆ ಸಂಸ್ಥೆಯಲ್ಲಿ ನಡೆಯಲಾದ ಅಸ್ಮಾ ಉಲ್ ಹುಸ್ನಾ ರಾತೀಬ್ ವೇದಿಕೆಯಲ್ಲಿ ಸಯ್ಯಿದ್ ಶಾಫಿ ಬಾ ಅಲವೀ ತಂಙಳ್(ಮದೀನಾ ಮುನವ್ವರ) ರವರು ಸಂಘಟನೆಯ ಲೋಗೋವನ್ನು ಅನಾವರಣಗೊಳಿಸಿದರು.
ಲೋಗೋ ಸಂಕ್ಷಿಪ್ತವಾಗಿ ಪುಸ್ತಕದ ಮಾದರಿಯನ್ನು ಹೊಂದಿದ್ದು ಓದು ಮತ್ತು ಬರವಣಿಗೆಯ ಮೇಲೆ ಒ ತ್ತನ್ನು ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಂಘಟನೆಯು ನಿರಂತರ ಸಹಕಾರಿಯಾಗುತ್ತಾ ಮುಂದುವರಿಯುತ್ತಿದೆ. ವೇದಿಕೆಯಲ್ಲಿ ಸಂಸ್ಥೆಯ ಸಾರಥಿಗಳಾದ ಶೈಖುನಾ ಅಹ್ಸನಿ ಉಸ್ತಾದ್ , ಅಧ್ಯಕ್ಷರಾದ ಅಬೂಬಕರ್ ಹಾಜಿ , ಪ್ರಾಂಶುಪಾಲರಾದ ಅಬ್ದುಲ್ ರಶೀದ್ ಸಅದಿ ಉಸ್ತಾದ್, ಗುರುವರ್ಯರುಗಳಾದ ಇಸ್ಮಾಯೀಲ್ ಸಖಾಫಿ ಉಸ್ತಾದ್, ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ಮತ್ತಿತರ ಗುರುವೃಂದರು ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.