ಫರಂಗಿಪೇಟೆ (www.vknews. in) : ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಶಿಕ್ಷಕರು ಮತ್ತು ರಕ್ಷಕರು ಹೊಣೆಗಾರಿಕೆಯಿಂದ ಆದರ್ಶ ಜೀವನ ನಡೆಸಿ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಬೆಳಕು ನೀಡಬೇಕು ಮತ್ತು ದಾರಿದೀಪವಾಗ ಬೇಕೆಂದು ಫರಂಗಿಪೇಟೆ ಹತ್ತನೇ ಮೈಲುಕಲ್ಲು ತರ್ಬಿಯತುಲ್ ಅತ್ಫಾಲ್ ಮದ್ರಸದ ಮುಖ್ಯೋಪಾಧ್ಯಾಯರಾದ ಮುಹಮ್ಮದ್ ಇಕ್ಬಾಲ್ ಮಖ್ದೂಮಿ ಫೈಝಿ ಅಮ್ಮೆಮಾರ್ ಹೇಳಿದರು.
ಹತ್ತನೇ ಮೈಲುಕಲ್ಲು ತ್ವಾಹ ಜುಮಾ ಮಸೀದಿ ಮತ್ತು ತರ್ಬಿಯತುಲ್ ಅತ್ಫಾಲ್ ಮದ್ರಸದ ಆಡಳಿತ ಸಮಿತಿಯು ಏರ್ಪಡಿಸಿದ “ರಕ್ಷಕ, ಶಿಕ್ಷಕ” ಸಭೆಯಲ್ಲಿ ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು. ಖತೀಬರಾದ ಮುಹಮ್ಮದ್ ಫವಾಝ್ ನಿಝಾಮಿ ಅಲ್ ಅನ್ಸಾರಿ ದಯಂಬು ಸಭೆಯನ್ನು ಉದ್ಘಾಟಿಸಿ, ಶಿಕ್ಷಕರು, ವಿದ್ಯಾರ್ಥಿಗಳ ಜೀವನದಲ್ಲಿ ಅದ್ಭುತ ಪ್ರಭಾವ ಬೀರಬಲ್ಲರು, ವಿದ್ಯಾರ್ಥಿಗಳಿಗೆ ಜ್ಞಾನ, ನೈತಿಕತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಒದಗಿಸಿ, ಯಶಸ್ಸಿನ ಹಾದಿಯನ್ನು ಒದಗಿಸುತ್ತಾರೆ ಎಂದು ಹೇಳಿದರು. ಮಸೀದಿ ಮತ್ತು ಮದ್ರಸದ ಆಡಳಿತ ಕಮಿಟಿ ಅಧ್ಯಕ್ಷರಾದ ಎಸ್. ಹಸನಬ್ಬ ಗುಡ್ಡೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಲಹೆ, ಸೂಚನೆಯನ್ನು ನೀಡಿದರು.
ಪ್ರಧಾನ ಕಾರ್ಯದರ್ಶಿ ನಝೀರ್ ಅಬೂಬಕರ್ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್. ಖಾಲಿದ್, ಜೊತೆಕಾರ್ಯದರ್ಶಿ ಮುಹಮ್ಮದ್ ಹನೀಫ್, ಮದ್ರಸ ಉಸ್ತುವಾರಿ ದಾವೂದ್, ಸದಸ್ಯರಾದ ಅನ್ವರ್, ಅಬ್ದುಲ್ ಗಫೂರ್ ಹಾಗೂ ಮದ್ರಸ ಅಧ್ಯಾಪಕರಾದ ಮುಹಮ್ಮದ್ ಇಲ್ಯಾಸ್ ಆರ್ಶದಿ ಪೆರಿಯಪಾದೆ ಮತ್ತು ಡಿ.ಎ.ಅಬ್ಬಾಸ್ ರಝ್ವಿ ಪಡಿಕ್ಕಲ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.