(www.vknews.in) : ದುಬೈ ಯ ಅಲ್ ಜದ್ದಾಫ್ ನಲ್ಲಿರುವ DHA Blood Donation Centre ನಲ್ಲಿ ಪ್ರವಾಸಿ ನಾಖುದಾ ಶೀರೂರು. ಯು.ಎ.ಇ ವತಿಯಿಂದ ರಕ್ತದಾನ ಮಾಡಿ ಮಾನವೀಯತೆಯ ಸಂದೇಶ ಸಾರಲಾಯಿತು. ದಿನಾಂಕ 27/10/24 ರಂದು ಮೊದಲೇ ನಿರ್ಧರಿಸಿದಂತೆ ಬೆಳಿಗ್ಗೆ 7.30 ಗಂಟೆಗೆ ಸರಿಯಾಗಿ ಸೇರಿದ ನಾಖುದಾ ರಕ್ತದಾನಿಗಳು ರಕ್ತ ದಾನ ಮಾಡುವ ಮೂಲಕ ಅವಶ್ಯಕ ಸಂದರ್ಭದಲ್ಲಿ ರಕ್ತ ದೊರಕಲು ತಮ್ಮ ಕೊಡುಗೆಯನ್ನು ನೀಡಿದರು.
ಪ್ರವಾಸಿ ನಾಖುದಾ ಯು.ಎ. ಇ ಒಕ್ಕೂಟದ ವತಿಯಿಂದ ಕರೆ ನೀಡಿದ ಈ ಕಾರ್ಯಕ್ರಮವು ರಕ್ತದಾನಿಗಳ ಮೂಲಕ ಯಶಸ್ವಿಯಾಯಿತು. ರಕ್ತದಾನ ಮಾಡುವ ಮೊದಲು ಸಂಘವು ನೀಡಿದ ಲಘು ಉಪಹಾರವನ್ನು ಸವಿದ ರಕ್ತದಾನಿಗಳು ತುಂಬಾ ಉತ್ಸಾಹದಿಂದ ರಕ್ತ ದಾನ ಮಾಡಲು ಮೊದಲೇ ತಯಾರಿಯಲ್ಲಿರಿಸಿದ ಹಾಲ್ ಗೆ ತೆರಳಿ ರಕ್ತದಾನ ಮಾಡಿದರು. ಬಳಿಕ ಸಂಘದ ಪರವಾಗಿ ತಮ್ಮ ತಮ್ಮ ವಿಚಾರ ವಿಮರ್ಶೆಯಲ್ಲಿ ಭಾಗಿಯಾಗಿ , ಈ ಪವಿತ್ರ ಕಾರ್ಯಕ್ರಮದ ಬಗ್ಗೆ ಅತೀವ ಸಂತೋಷ ವ್ಯಕ್ತ ಪಡಿಸಿ, ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದಾದ ಬಳಿಕ ಪೋಟೋ ಗೆ ಫೋಸ್ ನೀಡಿದ ಸದಸ್ಯರು ತಮ್ಮ ಒಗ್ಗಟ್ಟನ್ನು ಬಲವಾಗಿ ಸಾರುತ್ತಾ, ಸ್ವಲ್ಪ ಕಾಲ ಕುಶಾಲೋಪಕಾರಿಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಖೋಕಾ ಅಬು ಅಹ್ಮದ್ ರವರು ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿ, ಭಾಗಿಯಾದ ಸರ್ವರಿಗೂ ಸ್ವಾಗತಿಸುತ್ತಾ ಕಾರ್ಯಕ್ರಮ ಯಶಸ್ವಿ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕೊನೆಯದಾಗಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ಜಾವೀದ್ ರವರು ಕಾರ್ಯಕ್ರಮದ ಬಗ್ಗೆ ಅತೀವ ಸಂತೋಷ ವ್ಯಕ್ತ ಪಡಿಸುತ್ತಾ, ಈ ಕಾರ್ಯಕ್ರಮವು ನಾವು ಮಾಡಿದ ಪವಿತ್ರ ಕಾರ್ಯಕ್ರಮ . ಊಹಿಸಲೂ ಸಾಧ್ಯವಾದಂತಹ ಕಾರ್ಯಕ್ರಮ ನಮ್ಮಿಂದ ಸಾಧ್ಯವಾಗಿದೆ ಹಾಗೂ ಇದರಿಂದ ನಾವು ನಮ್ಮನ್ನು ಪವಿತ್ರ ಕೆಲಸಗಳಲ್ಲಿ ತೊಡಗಿಸಿದ್ದೇವೆ ಎಂದರು. ನಾವು ಇಂತಹ ಕಾರ್ಯಕ್ರಮದಲ್ಲಿ ಸ್ವ – ಇಚ್ಛೆಯಿಂದ ಭಾಗಿಯಾಗಬೇಕೆಂದರು. ಅಧ್ಯಕ್ಷರಾದ ಎಂ. ಯಾಸೀನ್ ಇತರರು ಅಗತ್ಯ ಸಹಾಯ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.