(www.vknews.in) ;ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಕಲಾಬಾಗಿಲು ಮೂಡುಪಡುಕೋಡಿ ಇಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಮಾಜ ಸೇವಕರು ಹಾಗೂ ಬದ್ರಿಯಾ ಜುಮಾ ಮಸೀದಿ ಇರ್ವತ್ತೂರು ಪದವು ಇಲ್ಲಿಯ ಮಾಜಿ ಅಧ್ಯಕ್ಷರಾರ ಪಿ.ಕೆ.ಇದ್ದಿನಬ್ಬ ಇವರು ಧ್ವಜಾರೋಹಣ ನೆರವೇರಿಸಿದರು.
ಗ್ರಾಮ ಪಂಚಾಯತ್ ಇರ್ವತ್ತೂರು ಇಲ್ಲಿಯ ಮಾಜಿ ಉಪಾಧ್ಯಕ್ಷರಾದ ಶಂಕರ್ ಶೆಟ್ಟಿ ಬೆದ್ರಮಾರ್ ಕನ್ನಡ ನಾಡ ಧ್ವಜಾರೋಹಣ ನೆರವೇರಿಸಿ ಕನ್ನಡ ನಾಡಿನ ಬಗ್ಗೆ ಮಾತಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಮಾಜಿ ಪತ್ರಕರ್ತ ಶಬೀರ್ ಅಹ್ಮದ್,ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಮುಖ್ಯ ಶಿಕ್ಷಕಿ ಜಯಶ್ರೀ ಸಿ ಸಾಲ್ಯಾನ್ ಉಪಸ್ಥಿತರಿದ್ದರು. ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶಿಕ್ಷಕಿ ಚಂದ್ರಾವತಿ ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು.ಬಂದಂತಹ ಅತಿಥಿಗಳನ್ನು ಚೇತನಾ ಸ್ವಾಗತಿಸಿದರು. ಎಸ್.ಪಿ.ರಝೀಯ ಧನ್ಯವಾದ ಸಮರ್ಪಿಸಿದರು.ಮಮತಾ ಆರ್ ಕಾರ್ಯಕ್ರಮ ನಿರೂಪಿಸಿದರು. ತದ ನಂತರ ವಿದ್ಯಾರ್ಥಿಗಳಿಂದ ಕನ್ನಡ ಭಾಷಣ, ಕನ್ನಡ ನಾಡ ಸೊಬಗನ್ನು ವರ್ಣಿಸುವ ಹಾಡುಗಾರಿಕೆ , ನೃತ್ಯ ಪ್ರದರ್ಶನ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.