ಉಳ್ಳಾಲ (www.vknews.in) : ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಅಶ್ರಫ್ ಕೆಸಿ ರೋಡ್ ರವರನ್ನು ಶಾಸಕರ ಸೂಚನೆಯಂತೆ ಸದಸ್ಯರ ಸಮ್ಮತಿಯೊಂದಿಗೆ ಉಳ್ಳಾಲ ಬ್ಲಾಕ್ ಅಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ ಬೋಳಿಯಾರ್ ರವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ತಲಪಾಡಿ ಗ್ರಾಂಡ್ ವ್ಯೂ ಗೆಸ್ಟ್ ಹೌಸ್ ನಲ್ಲಿ ನವೆಂಬರ್ 9 ರಂದು ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ವಿನಯ್ ಕುಮಾರ್ ಶೆಟ್ಟಿ, ಅಬ್ದುಲ್ ಸಲಾಂ ಕೆಸಿ ರೋಡ್, ವಸಂತಿ ತಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಕೆಸಿ ರೋಡ್, ಕಾರ್ಯದರ್ಶಿ ಅಬ್ಬಾಸ್ ಪಂಜಳ, ರಾಜೇಶ್ ಕೊಟ್ಟಾರಿ, ಬಿ . ಎಸ್ ಇಸ್ಮಾಯಿಲ್ ಕೋಶಾಧಿಕಾರಿಯಾಗಿ ಯಾಕೂಬ್ ಪಿಲಿಕೂರ್ ರವರನ್ನು ಆಯ್ಕೆ ಮಾಡಲಾಯಿತು.
ತಲಪಾಡಿ ವಲಯದಿಂದ ಬ್ಲಾಕ್ ಪ್ರತಿನಿಧಿಗಳಾಗಿ ಸಚ್ಚಿದಾನಂದ ಶೆಟ್ಟಿ, ಹಸೈನಾರ್ ಕೆಸಿ ನಗರ, ಅಬ್ದುಲ್ ಖಾದರ್ ಮಕ್ಯಾರ್, ಲತಾ ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಉಪಾಧ್ಯಕ್ಷರೂ, ಮಾಜಿ ತಾಪಂ ಸದಸ್ಯರಾದ ಸುರೇಖಾ ಚಂದ್ರಹಾಸ್, ಬ್ಲಾಕ್ ಕೋಶಾಧಿಕಾರಿ ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.