(www.vknews.in) : ಖ್ಯಾತ ಸಮಾಜ ಸೇವಕ ಕುಂಞ ಮೋನಾಕ ಕೋಡಿ 3 ನೇ ವಾರ್ಡ್ ನಿಂದ ಆರಿಸಿ ಬಂದು ಉಳ್ಳಾಲ ನಗರ ಸಭಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರಿಗೆ ಸಹಾಯಕರಾಗಿ ಅವರ ಶಿಷ್ಯ ಅಬ್ದುಲ್ ಅಝೀಝ್ ಕೆಲಸ ಮಾಡುತ್ತಾ ಕುಂಞ ಮೋನಾಕ ರಿಂದ ಸಮಾಜ ಸೇವಾ ಕಾರ್ಯ ವಿಧಾನವನ್ನು ಅರಿತು ಕೊಳ್ಳುತ್ತಾರೆ.
ಮುಂದೆ ಕುಂಞ ಮೋನಾಕ ಚುನಾವಣಾ ಸ್ಪರ್ಧಾ ಕಣದಿಂದ ನಿವೃತ್ತಿಯಾದಾಗ ವಾರ್ಡ್ 3 ರನ್ನು ಅಝೀಝ್ ಪ್ರತಿನಿಧಿಸ ಬೇಕೆಂದು ಅಲ್ಲಿನ ವಾರ್ಡ್ ಜನರ ಇಚ್ಛೆ ಯಾಗಿತ್ತು. ಮೇಲಾಗಿ ಶಾಸಕ UT ಖಾದರ್ ರವರು ಕೂಡ ಅಝೀಝರೇ ಆ ವಾರ್ಡ್ ನಿಂದ ಸ್ಪರ್ಧೆ ಮಾಡ ಬೇಕೆಂದು ಒಲವು ತೋರಿದ್ದರು. ಯಾಕೆಂದರೆ ಅಝೀಝ್ ಆಗಲೇ ಸರಕಾರಿ ಸೇವಾ ಸೌಲಭ್ಯ ಗಳಾದ ವಿದಾರ್ಥಿ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಬಡವರ ಮನೆ ನಿರ್ಮಾಣಕ್ಕೆ ಸಹಾಯ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮುಂತಾದ ಸೇವೆಗಳ ಅವಶ್ಯಕತೆ ಇರುವ ತಮ್ಮ ವಾರ್ಡ್ ಜನರ ಸಹಾಯಕ್ಕೆ ಬರುತ್ತಿದ್ದರು. ಹೀಗಾಗಿ ಆಗಲೇ ವಾರ್ಡ್ 3 ರಲ್ಲಿ ಅವರು ಜನಪ್ರಿಯವಾಗಿದ್ದರು.
ಆದರೂ ಚುನಾವಣಾ ಟಿಕೆಟ್ ಹಂಚಿಕೆಯ ಕೊನೇ ಕ್ಷಣದಲ್ಲಿ ರಾಜಕೀಯದಲ್ಲಿ ತೆರೆ ಮರೆಯಲ್ಲಿ ನಡೆಯುವಂತಹ ಕಸರತ್ತು ಇಲ್ಲಿಯೂ ನಡೆದು ಅಝೀಝ್ ರಿಗೆ ಟಿಕೆಟ್ ತಪ್ಪು ಹೋಗುತ್ತೆ. ವಾರ್ಡ್ ಜನರ ಅಪೇಕ್ಷೆ, ಒತ್ತಡ, ಒತ್ತಾಯದ ಮೇರೆಗೆ ಅಝೀಝ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 182 ಮತಗಳ ಅಂತರದ ಗೆಲುವಿನೊಂದಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ.
ಪಕ್ಷೇತರ ಸದಸ್ಯರಾದರೂ ಕೂಡ ಅಝೀಝ್ ಮಾನಸಿಕವಾಗಿ ಕಾಂಗ್ರೆಸ್ ಪರ ಇದ್ದು, ನಗರ ಸಭೆಯಲ್ಲಿ ಸಂಖ್ಯಾ ಬಲ ಪ್ರದರ್ಶನದ ನಿರ್ಣಾಯಕ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ಓಡಿ ಬರುತ್ತಿದ್ದರು. ಇದರಿಂದ ಇವರು ಶಾಸಕ UT ಖಾದರ್ ರವರಿಗೆ ಇಷ್ಟವಾದರು.
ಮುಂದೆ ಶಾಸಕರ ಸಹಕಾರದಿಂದ ಅಝೀಝ್ ತಮ್ಮ ವಾರ್ಡ್ ನಲ್ಲಿ ರಸ್ತೆ, ಚರಂಡಿ, ತಡೆ ಗೋಡೆ, ಮಾರಕ ರೋಗಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಮಲಗಿದ ಅಸಹಾಯಕ ರೋಗಿಗಳ ಕೈಗೆ ಬರುವ ಲಕ್ಷ ಲಕ್ಷ ಗಳ ಬಿಲ್ ಗಳಿಗೆ ಶಾಸಕರ ಶಿಫಾರಸ್ಸು ಮೂಲಕ ಸಮಾಧಾನಕರ discount ಕೊಡಿಸುವೂದು ಹಾಗೂ ಇತರ ಕೆಲಸ ಕಾರ್ಯಗಳ ಮೂಲಕ ವಾರ್ಡ್ ಜನರಿಂದ Azeez is the best ಎನಿಸಿ ಕೊಳ್ಳುತ್ತಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ UT ಖಾದರ್ ಪರ ಅವರು ಡೋರ್ ವರ್ಕ್ ಕೂಡ ಮಾಡುತ್ತಾರೆ.
ಚುನಾವಣಾ ನಂತರ ಅಝೀಝರನ್ನು ಪಕ್ಷಕ್ಕೆ ಶಾಸಕರೇ ಮುಂದೆ ನಿಂತು ಸೇರ್ಪಡೆ ಗೊಳಿಸಲು ಆಲೋಚಿಸಿದ್ದರು. ಆದ್ರೆ ಸಭಾಪತಿಯಾಗಿ ಆಯ್ಕೆಯಾದ ಶಾಸಕ UT ಖಾದರ್ ರಿಗೆ ರಾಜಕೀಯ ಅಡೆತಡೆ ಇದ್ದ ಕಾರಣದಿಂದ ಪಕ್ಷಕ್ಕೆ ಅಝೀಝ್ ಸೇರ್ಪಡೆ ವಿಳಂಬ ಆಗುತ್ತಾ ಹೋಗುತ್ತೆ.
ದಿನಾಂಕ 8 ಆದಿತ್ಯವಾರ ಸಂಜೆ ಮುಸ್ತಫ ಅಬ್ದುಲ್ಲಾ ರವರ ನೇತೃತ್ವದಲ್ಲಿ ಸಭೆಯೊಂದು ನಡೆಯುತ್ತದೆ. ಸ್ಥಳಿಯ ನಾಯಕರು, ನಗರಸಭಾ ಸದಸ್ಯರು ಗಳು, ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದ ಈ ಸಭೆ ನಡೆಯುವ ಸಂದರ್ಭದಲ್ಲಿ ಮಾನ್ಯ ಸ್ಪೀಕರ್ UT ಖಾದರ್ ರವರ ಫೋನು ಬರುತ್ತೆ, ಸಭೆಯಲ್ಲಿ ಸೇರಿದವರ ಮಾಹಿತಿ ಪಡೆದ ಶಾಸಕರಿಗೆ ಅಲ್ಲಿ ಅಝೀಝ್ ಉಪಸ್ಥಿತಿಯ ಬಗ್ಗೆ ತಿಳಿದು ಅದೇ ಸಭೆಯಲ್ಲಿ ಅಝೀಝ್ ರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಸ್ತಫ ಅಬ್ದುಲ್ಲಾ ರಿಗೆ ನೀಡಿದ ಸೂಚನೆಯಂತೆ ದಿನಾಂಕ 8 ರಂದು ಅಝೀಝ್ ರವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.