ಮಂಗಳೂರು (www.vknews.in) : ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿಯು ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸುತ್ತಿರುವ ಮದ್ರಸಾ ವಿದ್ಯಾರ್ಥಿಗಳ ಪ್ರತಿಭಾ ಸಂಗಮದ ರಾಜ್ಯ ಮಟ್ಟದ ಸ್ಪರ್ಧೆಯು 2026 ನವಂಬರ್ 7 ಮತ್ತು 8 ರಂದು ಕೊಡಗಿನಲ್ಲಿ ನಡೆಯಲಿದೆ.
ಈ ದಿನಾಂಕವನ್ನು ಈ ಬಾರಿ ಮಂಜನಾಡಿ ಅಲ್ ಮದೀನಾದಲ್ಲಿ ನಡೆದ ಎಸ್.ಜೆ.ಎಂ.ರಾಜ್ಯ ಮಟ್ಟದ ಪ್ರತಿಭಾ ಸಂಗಮ -24 ಉದ್ಘಾಟನಾ ಸಮಾವೇಶದಲ್ಲಿ ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಅಧ್ಯಕ್ಷರಾದ ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀ ತಂಙಳ್ ರವರು ಘೋಷಿಸಿದರು.
ಸುನ್ನೀ ವಿದ್ಯಾಭ್ಯಾಸ ಬೋರ್ಡ್ ನಾಯಕರಾದ ಖುದುವತುಸ್ಸಾದಾತ್ ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್, ಪ್ರೊಫೆಸರ್ ಅಬ್ದುಲ್ ಹಮೀದ್ ಸಾಹಿಬ್ ಎಸ್.ಜೆ.ಎಂ.ಕೇಂದ್ರ ನಾಯಕರಾದ ಅಬೂಹನೀಫಲ್ ಫೈಝಿ ತೆನ್ನಲ,ವಿ.ಪಿ.ಎಂ.ಫೈಝಿ ವಿಲ್ಯಾಪಳ್ಳಿ,ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ , ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ.ಕಾಮಿಲ್ ಸಖಾಫಿ,ಕೋಶಾಧಿಕಾರಿ ಪುಂಡೂರು ಇಬ್ರಾಹಿಂ ಸಖಾಫಿ ಉಪಸ್ಥಿತರಿದ್ದರು.
ಪ್ರಕಟಣೆ: ಅಬ್ದುಲ್ ಅಝೀಝ್ ನೂರಾನಿ ಬೆಟ್ಟಂಪಾಡಿ ಕಾರ್ಯದರ್ಶಿ ಎಸ್.ಜೆ.ಎಂ.ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.