ಮಂಗಳೂರು (www.vknews.in) : ಸಮಾಜಸೇವೆ ಮತ್ತು ಹೋರಾಟವನ್ನು ಜೀವನದ ಒಂದು ಭಾಗವಾಗಿಸಿ ಸಮಾಜದ ಕಟ್ಟ ಕಡೆಯ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿರುವ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸುವ ಮೂಲಕ ತನ್ನ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ. ತೊಕ್ಕೋಟು ಗ್ರೀನ್ ಸಿಟಿಯಲ್ಲಿ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ನ ನೂತನ ಅತ್ಯಾಧುನಿಕ ಶೈಲಿಯ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಬಡ ಮತ್ತು ಶ್ರೀಮಂತ ವರ್ಗವಿದ್ದು ಶ್ರೀಮಂತ ವರ್ಗ ತಮ್ಮ ಸಂಪಾದನೆಯ ಒಂದಂಶವನ್ನು ಜೀವನದಲ್ಲಿ ಕಷ್ಟ ಅನುಭವಿಸುವವರಿಗೆ ಮೀಸಲಿಟ್ಟರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಎರಡು ಗೌರವ ಡಾಕ್ಟರೇಟ್ ಪದವಿ ಸಹಿತ ಸಮಾಜದಲ್ಲಿ ಅಪಾರ ಗೌರವಾದರಗಳಿಗೆ ಪಾತ್ರರಾಗಿರುವ ಡಾ| ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಈ ನಿಟ್ಟಿನಲ್ಲಿ ಪ್ರಶಂಸಾರ್ಹ ಸೇವೆ ಸಲ್ಲಿಸುತ್ತಿದ್ದಾರೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ| ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ” ನಾನು ಕಲಿತ ಹರೇಕಳ ರಾಮಕೃಷ್ಣ ಪ್ರೌಢಶಾಲೆ ವಿವಿಧ ಪ್ರತಿಭೆಗಳನ್ನು ನಾಡಿಗೆ ಸಮರ್ಪಿಸಿದ ಮಾದರಿ ಶಾಲೆಯಾಗಿದೆ.
ನನ್ನ ಸೇವೆ ಮತ್ತು ಸಾಧನೆಗಳಿಗೆ ನನ್ನ ಗುರುಗಳಾದ ರವೀಂದ್ರ ರೈ ಕಲ್ಲಿಮಾರ್ ಮತ್ತು ತ್ಯಾಗಂ ಮಾಸ್ಟರ್ ಹರೇಕಳ ಪ್ರೇರಣೆಯಾಗಿದ್ದು ಮೌಲ್ಯಾಧಾರಿತ ಶಿಕ್ಷಣ ಮೂಲಕ ಇಬ್ಬರು ಮಹಾನ್ ವ್ಯಕ್ತಿಗಳು ಸಮಾಜವನ್ನು ಒಳಿತಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. ನನ್ನ ಸೇವಾ ಕಾರ್ಯಗಳಿಗೆ ದೇಶವನ್ನು ಕಟ್ಟಿದ ಮತ್ತು ಮಾನವತೆಯನ್ನು ಬಡಿದೆಬ್ಬಿಸಿದ ದೇಶ ಪ್ರೇಮಿಗಳು ಕೂಡ ಪ್ರೇರಕ ಶಕ್ತಿಯಾಗಿದ್ದಾರೆ. ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಬಡವರ ಕಣ್ಣೀರೊರೆಸುವ ಮಹತ್ಕಾರ್ಯಗಳನ್ನು ಮಾಡಲು ಇನ್ನಷ್ಟು ಉತ್ಸಾಹದಿಂದ ಹೆಜ್ಜೆಯನ್ನಿಟ್ಟಿದ್ದು ಸಮಾಜ ಇದರೊಂದಿಗೆ ಕೈ ಜೋಡಿಸಬೇಕು. ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಆದರ್ಶ ಹೋರಾಟ ಮಾಡಲು ಸಮಾಜ ನನಗೆ ಬೆಂಬಲ ನೀಡಿದರೆ ಅನೆ ಬಲ ಬಂದಂತಾಗುತ್ತದೆ ಎಂದು ಅವರು ಹೇಳಿದರು.
ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಹೆ.ಆರ್.ಈಶ್ವರ್ ” ಸಂಕಷ್ಟದ ಸಮಯದಲ್ಲಿ ಸಹಾಯ ಸಹಕಾರದೊಂದಿಗೆ ಜನರ ಬಳಿ ತೆರಳುವ ನಿಷ್ಕಳಂಕ ಸಮಾಜಸೇವಕ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಅಲೆಮಾರಿ ಮಕ್ಕಳ ಶಿಕ್ಷಣ ಕ್ಕೆ ನೆರವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ಗ್ರೀನ್ ಸಿಟಿ ಮಾಲಕ ಇಬ್ರಾಹಿಂ,ಕಚೇರಿ ವಿನ್ಯಾಸ ಮಾಡಿದ ರಫೀಖ್,ಮುಝಮ್ಮಿಲ್,ಲೇಖಕ ಡಿ.ಎ.ಅಬ್ಬಾಸ್ ಪಡಿಕ್ಕಲ್, ನಾಡಗೀತೆ ಪ್ರಸ್ತುತ ಪಡಿಸಿದ ಶಿಕ್ಷಕಿ ಪುಟ್ಟಮ್ಮ ಮತ್ತು ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಮಾಜಿ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ ” ತನ್ನ ಶಿಷ್ಯ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಎಲ್ಲಾ ಪಕ್ಷ, ಸಂಘಟನೆ, ಧರ್ಮ, ಜಾತಿಯ ಜನರನ್ನು ತನ್ನ ಕಚೇರಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ತನ್ನ ಅನನ್ಯ ಸಾಮಾಜಿಕ ತುಡಿತವನ್ನು ತೋರ್ಪಡಿಸಿದ್ದಾರೆ ಎಂದರು.
ಶಿಕ್ಷಕ ತ್ಯಾಗಂ ಹರೇಕಳ ಅವರು ಮಾತನಾಡಿ ” ಸಮಾಜಸೇವೆ ಮಾಡಲು ಉತ್ತಮ ಮನಸ್ಸು, ತ್ಯಾಗ ಮನೋಭಾವ ಬೇಕು. ವಿದ್ಯಾರ್ಥಿ ಜೀವನದಲ್ಲೇ ಬಡಜನರ ಪರ ಕಾಳಜಿ ತೋರಿಸುತ್ತಿದ್ದ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ಸಮಾಜಸೇವಾ ಕ್ಷೇತ್ರದಲ್ಲಿ ಬೆಳೆದು ನಿಂತಿರುವುದು ಸಂತೋಷದ ಸಂಗತಿ ಎಂದು ತನ್ನ ಶಿಷ್ಯನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಬ್ದುಲ್ ಕರೀಂ ಅವರು ಮಾತನಾಡಿ ” ಸಮಾಜಸೇವೆಗೆ ಅದ್ಭುತ ಪ್ರತಿಪಲವಿದ್ದು ಅದನ್ನು ಪ್ರಪಂಚದ ಸೃಷ್ಟಿಕರ್ತ ನಿಗೆ ಬೇಕಾಗಿ ನಿಷ್ಕಳಂಕ ವಾಗಿ ಮಾಡಬೇಕು. ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಸಲ್ಲಿಸಿದ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ಸಮಾಜಕ್ಕೆ ಮಾದರಿ ಎನಿಸಿದ್ದಾರೆ ಎಂದರು.
ಉಳ್ಳಾಲ ನಗರಸಭೆಯ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮಾತನಾಡಿ ” ಇಪ್ಪತ್ತೈದು ವರ್ಷಗಳ ಹಿಂದಿನ ನನ್ನ ಸ್ನೇಹಿತ ಬಾಲ್ಯದ ದಿನಗಳಲ್ಲಿ ರಕ್ತದಾನದಂಥಾ ಸೇವೆ ಮಾಡುವ ಮೂಲಕ ಉತ್ತಮ ಸ್ವಭಾವ ಗುಣದಲ್ಲಿ ಬೆಳೆದು ಬಂದವರು ಎಂದು ಕೊಂಡಾಡಿದರು.
ರಾಜಕೀಯ,ಸಾಮಾಜಿಕ ಕಾರ್ಯಕರ್ತ ನಾಸಿರ್ ಅಹ್ಮದ್ ಸಾಮಣಿಗೆ ಮಾತನಾಡಿ ” ಮನುಷ್ಯರ ಹುಟ್ಟು ಮತ್ತು ಮರಣದ ನಡುವಿನ ಸಮಾಜಸೇವೆ ಸದಾ ಶಾಶ್ವತವಾಗಿ ಉಳಿಯುವಂಥದ್ದು. ಮನೆ ಹಾಗೂ ಇತರ ಸೇವೆಗಳನ್ನು ಮೂಲಕ ಮಾಡಿ ಕೊಟ್ಟು ಬಡವರ ಕಣ್ಣೀರೊರೆಸುವ ಕೆಲಸ ಎಂದರು.
ಕನ್ನಡ ಪರ ಹೋರಾಟಗಾರ ಮೌಸೀರ್ ಅಹ್ಮದ್ ಸಾಮಣಿಗೆ ಮಾತನಾಡಿ ” ಸಮಾಜ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ಪರಿಹರಿಸುವುದು ಪವಿತ್ರ ಕಾರ್ಯ. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಈ ನಿಟ್ಟಿನಲ್ಲಿ ಇಟ್ಟ ಹೆಜ್ಜೆ ಅಭಿನಂದನಾರ್ಯ ಎಂದು ಕೊಂಡಾಡಿದರು.
ಕರ್ನಾಟಕ ಭಾವೈಕ್ಯ ಪರಿಷತ್ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಮಾತನಾಡಿ ” ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆಗಳ ಮೂಲಕ ಮಹಾನುಭಾವರ ನುಡಿಮುತ್ತುಗಳ ಮೂಲಕ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಕಚೇರಿಯನ್ನು ಮನಮೋಹಕ ಶೈಲಿಯಲ್ಲಿ ವಿನ್ಯಾಸಗೊಳಿಸಿ ಡಾ| ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ಅವರಿಂದ ಪ್ರೇರಣೆ ಪಡೆದಿದ್ದಾರೆ.
ಜನಪ್ರತಿನಿಧಿಗಳು ಮಾಡುವ ಸೇವೆಯನ್ನು ಅಧಿಕಾರವಿಲ್ಲದೆ ಮಾಡುವ ಬಬ್ಬುಕಟ್ಟೆ ಯವರು ಅಧಿಕಾರದ ಶಕ್ತಿಯನ್ನು ಪಡೆದರೆ ಅಪ್ರತಿಮ ಸೇವೆಗಳ ಮೂಲಕ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತರುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯ ಪಟ್ಟರು.
ತೊಕ್ಕೋಟು ಮಸ್ಜಿದುಲ್ ಹುದಾ ಅಧ್ಯಕ್ಷ ಯು.ಎಂ.ಹಸನಬ್ಬ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಕಚೇರಿಯನ್ನು ಉದ್ಘಾಟಿಸಿದರು. ಅಬ್ದುಲ್ ರಝಾಖ್ ಬಬ್ಬುಕಟ್ಟೆ ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿದರು.
ಡಾ| ಬಿ.ಆರ್.ಅಂಬೇಡ್ಕರ್ ವಿದ್ಯಾನಿಧಿ ಸಮಿತಿ ಅಧ್ಯಕ್ಷ ಯಾದವ್ ಅಸೈಗೋಳಿ,ಸಲೀಂ ಮೆಗಾ,ಬಂಧುತ್ವ ಚಾರಿಟೇಬಲ್ ಟ್ರಸ್ಟ್ ನ ಅಬ್ದುಲ್ ನಝೀರ್, ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಮಹಿಳಾ ಅಧ್ಯಕ್ಷೆ ಸ್ವರ್ಣಲತಾ ,ಆಯಿಷಾ ಪೆರ್ಲ,ಸಾಮಾಜಿಕ ಕಾರ್ಯಕರ್ತ ಇಝ್ಝ ಬಜಾಲ್,ಸಿರಾಜ್ ಬಜಾಲ್, ಚಂದ್ರಿಕಾ ,ಸೌಮ್ಯ ಸೌದಾ ಇಸ್ಮಾಯಿಲ್,ಇಸ್ಹಾಖ್ ಬಜಾಲ್,ಮನ್ಸೂರ್ ಮಂಚಿಲ,ಹಫೀಝ್ ಅಲಿ,ಮುಸ್ತಫಾ,ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ಅಬ್ದುಲ್ ನಝೀರ್ ಅಕೌಂಟರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಸನ್ ಅಬೂಬಕರ್ ಅಶ್ರಫಿ ಹಂದಾನಿ ದುಆಃ ಆಶಿರ್ವಚನಗೈದರು. ಪತ್ರಕರ್ತ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.