(www.vknews.in) : ಭಾರತದಲ್ಲಿ ಮದುವೆ ಮನೆ ಅಂದರೆ ಜಗಳಗಳು ಸಾಮಾನ್ಯ. ಕೆಲವೊಮ್ಮೆ ಊಟದ ಬಗ್ಗೆ, ಇನ್ನು ಕೆಲವೊಮ್ಮೆ ವರದಕ್ಷಿಣೆ ಬಗ್ಗೆ, ಕೆಲವು ಬಾರಿ ವರನ ಹಿಂದಿನ ಸಂಬಂಧಗಳ ಬಗ್ಗೆ ಜಗಳಗಳು ನಡೆಯುತ್ತವೆ. ಏನೇ ಆಗಲಿ, ಮದುವೆ ಮನೆಯಲ್ಲಿ ಜಗಳಗಳು ಮಾಮೂಲು. ಇತ್ತೀಚೆಗೆ, ಮದುವೆ ಮಂಟಪಕ್ಕೆ ಅನಿರೀಕ್ಷಿತವಾಗಿ ಬಂದ ವರನ ಮಾಜಿ ಗೆಳತಿ, ವರನಿಗೆ ಹಿಂದಿನಿಂದ ಕಾಲಿನಿಂದ ಜಾಡಿಸಿ ಒದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ವಧು ವರನಿಗೆ ಮಾಲೆ ಹಾಕಿದ ನಂತರ, ವರ ವಧುವಿಗೆ ಮಾಲೆ ಹಾಕುತ್ತಿರುವಾಗ, ಹಿಂದಿನಿಂದ ಬಂದ ಯುವತಿ ವರನಿಗೆ ಕಾಲಿನಿಂದ ಜಾಡಿಸಿ ಒದ್ದಿದ್ದಾಳೆ. ಇದರಿಂದ ವರ ಮದುವೆ ಮಂಟಪದಲ್ಲಿ ಮುಗ್ಗರಿಸಿ ಮಾರುದ್ದ ಹೋಗಿ ಬಿದ್ದಿದ್ದಾನೆ. ನಂತರ ಬಿದ್ದ ವರನಿಗೆ ಒದೆಯುತ್ತಾ, ಕೈಗಳಿಂದಲೂ ಹಲ್ಲೆ ಮಾಡುತ್ತಾಳೆ. ಅವನನ್ನು ಮೇಲೆ ಎತ್ತಿದ ನಂತರವೂ ಹೊಡೆಯುತ್ತಾಳೆ. ಇದನ್ನು ನೋಡಿ ದಂಗಾದ ವಧು ಏನಾಗುತ್ತಿದೆ ಎಂದು ತಿಳಿಯದೆ ಒಂದು ಕ್ಷಣ ನಿಂತುಬಿಡುತ್ತಾಳೆ.
ಈ ವೇಳೆ ಮತ್ತೊಬ್ಬ ಮಹಿಳೆ ಮದುವೆ ಮಂಟಪಕ್ಕೆ ಬಂದು ಯುವತಿ ಹಲ್ಲೆ ಮಾಡುವುದನ್ನು ತಡೆಯುತ್ತಾಳೆ. ನಂತರ ವಧು ಮತ್ತು ಮಾಜಿ ಗೆಳತಿ ಜಗಳವಾಡುವುದನ್ನು ಕಾಣಬಹುದು. ವಿಡಿಯೋ ಬಹಳ ಬೇಗ ವೈರಲ್ ಆಯಿತು. ಅನೇಕರು ಇದು ಬಾಲಿವುಡ್ ಸಿನಿಮಾ ದೃಶ್ಯದಂತಿದೆ ಎಂದು ಬರೆದಿದ್ದಾರೆ.
View this post on Instagram A post shared by Sonu_Goswami (@sonukumargiri396)
A post shared by Sonu_Goswami (@sonukumargiri396)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.