ಬೆಂಗಳೂರು (www.vknews.in) ; ಮಗುವಿನ ಜೊತೆ ಹೊಸ ವರ್ಷದ ಪಾರ್ಟಿಗೆ ಆಗಮಿಸಿದ ಪೋಷಕರು, ಪಾರ್ಟಿ ಮತ್ತಲ್ಲಿ ಮಗುವನ್ನೇ ಮರೆತ ಘಟನೆ ಕೋರಮಂಗಲದಲ್ಲಿ ನಡೆದಿದೆ. ಪಾರ್ಟಿ ನಶೆಯಲ್ಲಿ ಪೋಷಕರು ತಾವು ಮಗುವನ್ನು ಕೆರೆದುಕೊಂಡು ಬಂದಿದ್ದೇವೆ ಅನ್ನೋದು ಮರೆತಿದ್ದಾರೆ. ಪರಿಣಾಮ ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದ ಮಗುವನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋರಮಂಗಲದಲ್ಲಿ ಕುಟುಂಬ ಪಾರ್ಟಿಗೆ ಹಾಜರಾಗಿದೆ. ಆದರೆ ಪಾರ್ಟಿ ನಶೆಯಲ್ಲಿ ಪೋಷಕರು ಮಗುವನ್ನು ಮರೆತಿದ್ದರೆ. ರಸ್ತೆಯಲ್ಲಿ ಒಂಟಿಯಾಗಿ ಅಳುತ್ತಾ ನಿಂತಿದ್ದ ಮಗುವನ್ನು ಪೊಲೀಸರು ಗಮನಿಸಿದ್ದಾರೆ. ಮಗುವಿನ ಬಳಿ ಬಂದ ಪೊಲೀಸರು ವಿಚಾರಿಸಿದ್ದಾರೆ. ಭಯ ಹಾಗೂ ಆತಂಕದಿಂದ ಅಳುತ್ತಿದ್ದ ಮಗುವನ್ನು ಸಮಾಧಾನಿಸಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪುಟ್ಟ ಮಗು ಪೊಲೀಸರ ರಕ್ಷಣೆಯಲ್ಲಿದೆ.
ಇತ್ತ ಮಗುವಿನ ಪೋಷಕರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ.ಮಗುವನ್ನು ಬಿಟ್ಟು ಹೋದ ಪೋಷಕರ ಪತ್ತೆ ಹಚ್ಚಲು ತ್ವರಿತ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಈ ಘಟನೆ ಹಲವರಿಗೆ ಅಚ್ಚರಿ ತಂದಿದೆ. ಮಗುವನ್ನು ಕೆರೆದುಕೊಂಡು ಬಂದು, ಪಾರ್ಟಿ ನಡುವೆ ಮರೆತು ಹೋದ ಪೋಷಕರು ಯಾರು ಅನ್ನೋ ಕುತೂಹಲ ಇದೀಗ ಹಲವರಲ್ಲಿ ಹುಟ್ಟಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.