ಭೋಪಾಲ್ (www.vknews.in) : ನಾನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಚುನಾವಣಾ ಪ್ರಚಾರ ನಡೆಸಲು ಗುಜರಾತ್ ನಲ್ಲಿ ಹೋಗಿದ್ದ ವೇಳೆ ಆರ್ ಎಸ್ ಎಸ್ ವಿರುದ್ಧ ಮಾತನಾಡಬೇಡಿ, ಯಾಕೆಂದರೆ ಹಿಂದೂಗಳು ಸಿಟ್ಟಾಗುತ್ತಾರೆ’ ಎಂದು ನನಗೆ ಹೇಳಲಾಗಿತ್ತು ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಹೇಳಿದರು.
ಬಿಜೆಪಿಗೆ ನೆರವು ನೀಡುವ ಕಾಂಗ್ರೆಸ್ಸಿಗರನ್ನು ಕಿತ್ತೊಗೆಯಬೇಕು ಎಂಬ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬೆಂಬಲ ನೀಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಧ್ಯ ಪ್ರದೇಶದ ಮಾಜಿ ಸಿಎಂ, “ಆರ್ಎಸ್ಎಸ್ ಅನ್ನು ಟೀಕಿಸಿದರೆ ಹಿಂದುಗಳು ಸಿಟ್ಟಾಗುತ್ತಾರೆ. ಹೀಗಾಗಿ ಸಂಘವನ್ನು ಟೀಕೆ ಮಾಡದಂತೆ ಸಲಹೆ ನೀಡಲಾಗಿತ್ತು ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಪಕ್ಷದೊಳಗಿನ ಬಿಜೆಪಿ ಬೆಂಬಲಿಗರನ್ನು ಹೊರಹಾಕುವುದಾಗಿ ಹೇಳಿದ್ದಾರೆ. ನಾನು ಅವರ ಹೇಳಿಕೆಯನ್ನು ಬೆಂಬಲಿಸುವೆ. ಪಕ್ಷದ್ರೋಹಿಗಳನ್ನು ಅವರು ಹೊರಹಾಕುವ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಸಂಘವು ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಪ್ರತಿಪಾದಿಸಿರುವ ಅವರು, “ಅದು ಧರ್ಮದ ಹೆಸರಿನಲ್ಲಿ ಸಮುದಾಯವನ್ನು ದಾರಿ ತಪ್ಪಿಸುತ್ತದೆ. ಶೋಷಣೆಗೆ ಗುರಿ ಮಾಡುತ್ತದೆ. ಇದರ ಜೊತೆಗೆ ಬಿಜೆಪಿ ಸೇರಿಕೊಂಡು ಹಿಂದು ಸಮುದಾಯವನ್ನು ಒಡೆದು, ಅದರ ಆಧಾರದ ಮೇಲೆ ಅಧಿಕಾರ ಹಿಡಿಯಲು ಬಯಸುತ್ತದೆ ಎಂದು ಟೀಕಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.