ಸೌದಿ ಅರೇಬಿಯಾ (www.vknews.in) | ಉಮ್ರಾ ಯಾತ್ರೆಗಾಗಿ ಒಮಾನ್ ನಿಂದ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಕುಟುಂಬವು ಅಪಘಾತಕ್ಕೀಡಾಗಿ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ರಿಸಾಲಾ ಸ್ಟಡಿ ಸರ್ಕಲ್ (ಆರ್ಎಸ್ಸಿ) ಮತ್ತು ಒಮಾನ್ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶಿಹಾಬ್ ಕಪ್ಪಡ್ ಮತ್ತು ಮಿಸಾಬ್ ಕೂತುಪರಂಬು ಪ್ರಯಾಣಿಸುತ್ತಿದ್ದ ವಾಹನವು ಭಾನುವಾರ ಬೆಳಿಗ್ಗೆ ಸೌದಿ ಅರೇಬಿಯಾದ ಬತ್ತದಲ್ಲಿ ಅಪಘಾತಕ್ಕೀಡಾಗಿದೆ.
ಮೃತರನ್ನು ಶಿಹಾಬ್ ಅವರ ಪತ್ನಿ ಶಹಾಲಾ (30), ಮಗಳು ಆಲಿಯಾ (7) ಮತ್ತು ಮಿಜಾಬ್ ಅವರ ಮಗ ದಕ್ವಾನ್ (6) ಎಂದು ಗುರುತಿಸಲಾಗಿದೆ. ಮಿಸಾಬ್ ಅವರ ಪತ್ನಿ ಮತ್ತು ಇತರ ಮಕ್ಕಳು ಸೌದಿ ಅರೇಬಿಯಾದ ಕುಫುಫ್ ಕಿಂಗ್ ಫಹಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.