(www.vknews. in) ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ವತಿಯಿಂದ ಮಾನ್ಯ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಆಯುಕ್ತರಿಗೆ ಅನಧಿಕೃತವಾಗಿ ಲೆಕ್ಕಕ್ಕಿಂತ ಹೆಚ್ಚಿ ಮಕ್ಕಳನ್ನು ಹೊತ್ತೊಯ್ಯುವ ಹಾಗೂ ಶಾಲಾ ವ್ಯಾಪ್ತಿಯನ್ನು ಬಿಟ್ಟು ಸಂಚರಿಸುವ ಖಾಸಗಿ ಶಾಲಾ ವಾಹನಗಳ ಬಗ್ಗೆ ಕ್ರಮ ಜರಗಿಸುವಂತೆ ಮನವಿ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಶಾಲೆಗಳಿಗೆ ಶಾಲಾ ವಾಹನಗಳು, ಖಾಸಗಿ ವಾಹನಗಳು ಹಾಗೂ ರಿಕ್ಷಾ ಗಳಲ್ಲಿ ನಿಯಮ ವಿರುದ್ಧವಾಗಿ ಇಲಾಖಾ ನಿಯಮವನ್ನು ಉಲ್ಲಂಘಿಸಿ ಹೆಚ್ಚಿನ ಮಕ್ಕಳನ್ನು ಹೇರಿಕೊಂಡು ಮಿತಿಮೀರಿದ ವೇಗದಲ್ಲಿ ಅಪಾಯಕಾರಿ ರೀತಿಯಲ್ಲಿ ನಿರ್ಭಿತಿಯಿಂದ ಸಾಗುತ್ತಿದ್ದು ಕೂಡ ಯಾವುದೇ ರೀತಿಯ ಕಾನೂನು ಕ್ರಮಗಳು ಜರಗದೆ ಇರುವುದು ಅವರಿಗೆ ಬಲವನ್ನು ನೀಡುತ್ತಿದೆ.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಪ್ರಾಥಮಿಕ ಶಾಲೆಗಳು ಒಂದೂವರೆ ಕಿಲೋಮೀಟರ್ ನ ಒಳಗಡೆ ಇರಬೇಕು, ಹಾಗೂ ಒಂದು ಮಗು ದಾಖಲಾತಿ ಹೊಂದಿದ ಪ್ರದೇಶದಲ್ಲಿ ಇರಬೇಕು ಎಂದು ಸ್ಪಷ್ಟವಾಗಿ ಹೇಳುತ್ತಿದ್ದರೂ ಕೂಡ ಇಂತಹ ಅವೈಜ್ಞಾನಿಕ ರೀತಿಯಲ್ಲಿ ಮಕ್ಕಳನ್ನು ಸಾಗಿಸುತ್ತಿರುವುದು,ಅಪಾಯವನ್ನು ತರುವುದರೊಂದಿಗೆ ಆರ್ ಟಿ ಈ ಕಾಯ್ದೆಯ ಉಲ್ಲಂಘನೆ ಕೂಡ ಆಗಿರುತ್ತದೆ.
ಆದರಿಂದ ಈ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ಇದರ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈ ಗೊಂಡು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ,ಅನಧಿಕೃತವಾಗಿ ಲೆಕ್ಕಕ್ಕಿಂತ ಹೆಚ್ಚು ಮಕ್ಕಳನ್ನು ವಾಹನದಲ್ಲಿ ಕುಳ್ಳಿರಿಸಿ ಕೊಂಡು ಹೋಗುವ ಶಾಲಾ ವಾಹನಗಳು ಹಾಗೂ ಅನಧಿಕೃತ ಖಾಸಗಿ ವಾಹನಗಳ ಬಗ್ಗೆ ಸೂಕ್ತ ಕ್ರಮವನ್ನು ಜರಗಿಸಬೇಕೆಂದು ಮನವಿಯನ್ನು ಸಲ್ಲಿಸಲಾಯಿತು
ನಿಯೋಗದಲ್ಲಿ ಮೊಯ್ದಿನ್ ಕುಟ್ಟಿ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಹಾಗೂ ಉಮ್ಮರ್ ಟೆಕ್ನಿಕ್ ರಾಜ್ಯ ನಿರ್ದೇಶಕರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ (ರಿ) ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.