ಮಂಗಳೂರು (www.vknews.in) : ನೆರೆಯವನು ಹಸಿದಿರುವಾಗ ಉಂಡು ತೇಗುವವನು ನನ್ನ ಸಮುದಾಯದಲ್ಲಿ ಭಾಗಿಯಲ್ಲ ಎಂದು ಕಳಿಸಿಕೊಟ್ಟ ಪ್ರವಾದಿ ಮುಹಮ್ಮದ್ ರವರ ಸಂದೇಶದಂತೆ, ಪರಸ್ಪರ ಪ್ರೀತಿ, ವಿಶ್ವಾಸ ಹಂಚಿ ಕೊಳ್ಳುವ ಮೂಲಕ ತಖ್ವಾದೊಂದಿಗೆ ಜೀವಿಸಬೇಕೆಂದು ಬದ್ರಿಯಾ ಜುಮಾ ಮಸ್ಜಿದ್ ಬೊಳ್ಳಾಯಿ ಇದರ ಗೌರವಾನ್ವಿತ ಖತೀಬರಾದ K.H.U ಶಾಫಿ ಮದನಿ ಅಲ್-ಅಝ್ಹರಿ ಕರಾಯ ಜುಮಾ ನಮಾಜಿನ ನಂತರ ತಮ್ಮ ಪ್ರಭಾಷಣದಲ್ಲಿ ತಿಳಿಸಿದರು.
ಜುಮಾ ಖುತುಬಾದ ಸಾರಾಂಶವನ್ನು ವಿವರಿಸಿದ ಖತೀಬರು “ಹಜ್ಜ್”ಎಂಬುವುದು ಎಂಬುವುದು ಇಸ್ಲಾಮಿನ ಪಂಚ ಕರ್ಮವಾಗಿದ್ದು, ಸ್ವೀಕೃತವಾದ ಹಜ್ಜ್ ಗೆ ಸ್ವರ್ಗ ಆಗಿರುತ್ತದೆ ಪ್ರತಿಫಲ.. ಪುಣ್ಯ ಕಹ್ಬದಲ್ಲಿ ಹಜ್ ಕರ್ಮ ನಿರ್ವಹಿಸಲು ಅಣಿಯಾಗಿತ್ತಿರುವ ಸರ್ವ ಹಜ್ಜಾಜ್ ಗಳಿಗೆ ಪ್ರತ್ಯೇಕವಾಗಿ ಪ್ರಾರ್ಥಿಸಿದರು. ಪ್ರಚಲಿತ ಸನ್ನಿವೇಶದಲ್ಲಿ ನಡೆಯುತ್ತಿರುವ ಆಗು ಹೋಗುಗಳನ್ನೂ ಪ್ರಸ್ತಾಪಿಸಿದ ಖತೀಬರು, ಒಂದು ಕಡೆ ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದ್ದು, ಇನ್ನೊಂದು ಕಡೆ ಮನುಷ್ಯತ್ವ ಮರೆಮಾಚಲ್ಪಡುತ್ತಿದೆ. ವಂಚನೆಯ ಮೂಲಕ ಅಮಾಯಕ ಅಬ್ದುಲ್ ರಹೀಂ ಕೊಳ್ತಮಜಲು ಇವರನ್ನು ಫ್ಯಾಸಿಸ್ಟ್ ಶಕ್ತಿಗಳು,ಮತಾಂಧತೆಯ ಅಮಲಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಯಾವುದೇ ತಪ್ಪು ಮಾಡದ ಮುಗ್ಧ ಜೀವ ನಮ್ಮಿಂದ ಅಗಲಿ ಹೋಗಿದೆ ಇದು ಖಂಡನೀಯ ಎಂದರು, ಇದರ ಹಿಂದಿನ ಶಕ್ತಿಗಳಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಕೊಲೆಗಳಿಗೆ ಕಡಿವಾಣ ಆಗಬೇಕು, ಮನುಷ್ಯತ್ವ ಉಳಿಯಬೇಕೆಂದು ತಿಳಿಸಿದರು.
ರಾಜ್ಯದ ಘನವೆತ್ತ ಮುಖ್ಯ ಮಂತ್ರಿಯ ಮೇಲೆ ಅಪಾರ ಗೌರವ ಮತ್ತು ಬರವಸೆಯಿದ್ದು ಗ್ಯಾರಂಟಿ ಯೋಜನೆಗಿಂತ ಮಿಗಿಲಾಗಿ ಜೀವಿಸುವ ಗ್ಯಾರಂಟಿ ನೀಡುವ ಮೂಲಕ ಹಿಂದೂ ಮುಸ್ಲಿಂ ಪರಸ್ಪರ ಪ್ರೀತಿ ವಿಶ್ವಾಸ ದಿಂದ ಜೀವಿಸಲು ಅನುವು ಮಾಡಿ ಕೊಡಬೇಕೆಂದು ಅರ್ಥ ಗಂಭೀರವಾಗಿ ತಿಳಿಸಿದರು. ಮುಸ್ಲಿಂ ಸಮುದಾಯಕ್ಕೆ ಒಂದು ಸರಕಾರ ನಡೆಸಲು ಜನಸಂಖ್ಯೆಯ ಆದಾರದಲ್ಲಿ ಸಾಧ್ಯವಿಲ್ಲದಿದ್ದರೂ, ಇಲ್ಲಿ ಯಾರು ಸರಕಾರ ನಡೆಸಬೇಕೆಂದು ನಿರ್ಧರಿಸುವ ತಾಕತ್ತು ಮುಸಿಮರಿಗಿದ್ದು ಅದಕ್ಕಿರುವ ಸ್ಪಷ್ಟ ನಿರ್ದಶನವೇ ಕಳೆದ ವಿಧಾನ ಸಭೆಯ ಫಲಿತಾಂಶವಾಗಿದೆ.
ಆದುದರಿಂದ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿ ನಡೆಸುತ್ತಿರುವ ಎಲ್ಲಾ ಅನ್ಯಾಯಗಳು ಕೊನೆಯಾಗಬೇಕು. ಅದರೊಂದಿಗೆ ಅಮಾಯಕ ರಹೀಂ ಕುಟುಂಬಕ್ಕೆ ನ್ಯಾಯ ಸಿಗಬೇಕು ಅದಕ್ಕಾಗಿ ಎಲ್ಲಾ ಭಿನ್ನ ಅಭಿಪ್ರಾಯಗಳನ್ನು ಬದಿಗಿಟ್ಟು ಮುಸ್ಲಿಂ ಸಮುದಾಯ ಒಂದಾಗಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮರ್ಹೂಮ್ ಅಬ್ದುಲ್ ರಹೀಂ ಗಾಗಿ ಮತ್ತು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮರಣವನ್ನಪ್ಪಿದವರಿಗೆ ಮತ್ತು ಅವರ ಕುಟುಂಬಕ್ಕೆ ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು…
ರಿಪೋರ್ಟ್: ಬದ್ರಿಯಾ ಜುಮಾ ಮಸ್ಜಿದ್, ಬೊಳ್ಳಾಯಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.