(www.vknews.in) : ದುಷ್ಕರ್ಮಿಗಳಿಂದ ಕ್ರೂರವಾಗಿ ಹತ್ಯೆಗೀಡಾದ ಕೊಳ್ತಮಜಲ್ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್ಕೆಎಸ್ಎಸ್ಎಫ್ (SKSSF) ಕಾರ್ಯಕರ್ತ, ನಿಷ್ಕಲ್ಮಶ ಮತ್ತು ನಿಷ್ಕಳಂಕ ವ್ಯಕ್ತಿತ್ವದ ಅಮಾಯಕ ಅಬ್ದುಲ್ ರಹೀಮ್ ಅವರ ಕೊಲೆಯನ್ನು ಎಸ್ವೈಎಸ್ (SYS) ಮಿತ್ತಬೈಲ್ ವಲಯ ತೀವ್ರವಾಗಿ ಖಂಡಿಸಿದೆ.
ಈ ಕೊಲೆಗೆ ಗೃಹ ಇಲಾಖೆಯ ವೈಫಲ್ಯವೇ ಕಾರಣ ಎಂದು ವಲಯ ಆರೋಪಿಸಿದೆ. ದ್ವೇಷ ಭಾಷಣ ಮಾಡಿ ಅಮಾಯಕರನ್ನು ಹತ್ಯೆ ಮಾಡುವಂತೆ ಸಾರ್ವಜನಿಕವಾಗಿ ಕರೆ ನೀಡಿದವರನ್ನು ಆಗಲೇ ಬಂಧಿಸಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪೊಲೀಸ್ ವೈಫಲ್ಯದಿಂದಲೇ ಈ ಕೊಲೆ ನಡೆದಿದ್ದು, ಇದಕ್ಕೆ ಕಾರಣರಾದವರಿಗೂ, ಹಂತಕರಿಗೂ ಹಾಗೂ ಸೂತ್ರಧಾರರಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎಸ್ವೈಎಸ್ ಮಿತ್ತಬೈಲ್ ವಲಯದ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ನಿಝಾಮಿ ಅಲ್ ಫಾರೂಖಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವರಕ್ಕಲ್ ಅಬೂಬಕರ್ ಸಿದ್ದೀಖ್, ಅಬೂಸಿರಾಜ್ ಅಬೂಬಕರ್ ಮುಸ್ಲಿಯಾರ್, ಕಂಟ್ರಾಕ್ಟರ್ ಮುಹಮ್ಮದ್ ಶರೀಫ್ ನಂದರಬೆಟ್ಟು, ಇಕ್ಬಾಲ್ ಹನೀಫ್, ಇಬ್ರಾಹಿಂ ಬುಗೋಡಿ, ಫಾರೂಕ್ ಪರ್ಲಿಯಾ ಹಾಗೂ ಇನ್ನಿತರ ಎಸ್ವೈಎಸ್ ಮುಖಂಡರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.