ಮಂಗಳೂರು (www.vknews.in) : ಹಲವಾರು ಇತಿಹಾಸ ಪುಟಗಳಿಗೆ ಸಾಕ್ಷಿಯಾದ ಪರಿಶುದ್ಧ ಮೊಹರಂ ಆಗಮಿಸಿದ ಸಂತೋಷ ನಿಮಿತ್ತದಲ್ಲಿ ಗತ ಕಾಲದ ಪಾಪ ವಿಮೋಚನೆಯ ಮೂಲಕ ನವ ವರುಷವು ಸಾರ್ಥಕವಾಗಲಿ ಎಂದು ಬದ್ರಿಯಾ ಜುಮಾ ಮಸ್ಜಿದ್ ಬೊಳ್ಳಾಯಿ ಇದರ ಗೌರವಾನ್ವಿತ ಖತೀಬರಾದ K.H.U ಶಾಫಿ ಮದನಿ ಅಲ್-ಅಝ್ಹರಿ ಕರಾಯ ಜುಮಾ ನಮಾಜಿನ ನಂತರ ತಮ್ಮ ಪ್ರಭಾಷಣದಲ್ಲಿ ತಿಳಿಸಿದರು.
ಜುಮಾ ಖುತುಬಾದ ಸಾರಾಂಶವನ್ನು ವಿವರಿಸಿದ ಖತೀಬರು ಪುಣ್ಯ ಮೊಹರಂ ತಿಂಗಳು ಹಲವಾರು ಪ್ರವಾದಿಗಳ ಜೀವನದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿ ಬರೆಯುವ ಮೂಲಕ ಪುಣ್ಯ ಮತ್ತು ಅತೀ ಶ್ರೇಷ್ಟವಾದ ತಿಂಗಳು ಕೂಡಾ ಆಗಿರುತ್ತದೆ.ಜಗತ್ತು ಅದರಲ್ಲಿರುವ ದೃಷ್ಟಾಂತಗಳು ಭೂಮಿ,ಸೂರ್ಯ ಚಂದ್ರ ಸಹಿತ ಸೃಷ್ಟಿಕರ್ತನ ಹಲವಾರು ಮಹಿಮೆಗಳು ಪ್ರತ್ಯೇಕವಾಗಿ ಪ್ರಥಮವಾಗಿ ಧರೆಗೆ ವರುಷ ಧಾರೆಗೆಯ್ಯುವ ಮೂಲಕ ಮೊಹರಂ ಸಾಕ್ಷಿಯಾಗಿದೆ. ಮಾತ್ರವಲ್ಲ ಜಗತ್ತಿನ ಅಂತ್ಯ ದಿನವೂ ಕೂಡಾ ಮುಹರಮ್ ತಿಂಗಳಲಾಗಿರುತ್ತದೆ. ಅತ್ಯಂತ ಮಹತ್ವ ಪೂರ್ಣವಾದ ಈ ತಿಂಗಳು ಪ್ರಾರ್ಥನೆಗೆ ಉತ್ತರ ಲಭಿಸುವ ಈ ತಿಂಗಳಲ್ಲಿ ಅಲ್ಲಾಹನಿಗೆ ಇಬಾದತ್ ಮಾಡುವ ಮೂಲಕ ಪುಣ್ಯ ಮಾಸ ಧನ್ಯವಾಗಬೇಕೆಂದು ತಿಳಿಸಿದರು.
ಸಮಸ್ತ ಸ್ತಾಪಕ ದಿನದ ಬಗ್ಗೆ ಪ್ರಸ್ತಾಪಿಸಿದ ಖತೀಬರು ಸಮಸ್ತ ಎಂಬುವುದು ಅಲ್ಲಾಹನ ಅವುಳಿಯಾ ಮತ್ತು ಆರಿಫ್ ಗಳ ಸಂಘವಾಗಿದ್ದು.. ಅವರು ತೋರಿ ಕೊಟ್ಟ ಅಹ್ಲು ಸುನ್ನತ್ತಿ ವಲ್ ಜಮಾಅತ್ ನಲ್ಲಿ ಭದ್ರವಾಗಿ ಜೀವಿಸಬೇಕೆಂದು ತಿಳಿಸುತ್ತಾ.ಉಲಮಾಗಳ ಮಧ್ಯೆ ಸಂಘಟನಾತ್ಮಕವಾಗಿ ಕೆಲವೊಂದು ಅಭಿಪ್ರಾಯವಿದೆ ಹೊರತು ಸುನ್ನತ್ ಜಮಾಅತ್ ನ ಅದರ್ಶದಲ್ಲಿ ಎಲ್ಲಾ ಉಲಮಾಗಲು ಒಗ್ಗಟ್ಟಾಗಿದ್ದಾರೆ.ಅವರ ಬಗ್ಗೆ ಯಾರಿಗೂ ಕಲ್ಮಿಷಿತ, ಸಂಕುಚಿತ ಮನೋಭಾವ ಇರಕೂಡದು ಎಂದು ಅರ್ಥ ಗಂಭೀರವಾಗಿ ಹೇಳಿದರು.
ಸಜ್ಜನ ಸರಳತೆಯ ಪ್ರತೀಕ ಸಾತ್ವಿಕರಾದ ಶೈಖುನಾ ಕನ್ನಿಯತ್ ಉಸ್ತಾದ್, ಪಂಡಿತ ಲೋಕದ ಸೂರ್ಯ ಶೈಖುನಾ ಶಂಸುಲ್ ಉಲಮಾ ಇ.ಕೆ ಉಸ್ತಾದ್,ಅಗಾಧ ಪಾಂಡಿತ್ಯದ ದೊರೆ ತಾಜುಲ್ ಉಲಮಾ ಉಳ್ಳಾಲ ತಂಙಲರ ಜೀವನ ಶೈಲಿ ಮತ್ತು ಅವರು ತೋರಿದ ಆದರ್ಶ ಬದ್ಧತೆ ನಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.ಸಮಸ್ತದ ಸರ್ವ ಉಲಮಾಗಳನ್ನು ಗೌರವಿಸುವ ಮೂಲಕ ನೈಜ ಮುಸಲ್ಮಾನಾಗಿ ನವ ವರುಷದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಜೀವಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರತ್ಯೇಕವಾಗಿ ಸಮಸ್ತದ ಅಗಲಿದ ನೇತಾರರಿಗೆ ಪ್ರಾರ್ಥನೆ ನಡೆಸಲಾಯಿತು.
ರಿಪೋರ್ಟ್: ಬದ್ರಿಯಾ ಜುಮಾ ಮಸ್ಜಿದ್, ಬೊಳ್ಳಾಯಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.