ಮಲಪ್ಪುರಂ (www.vknews.in) | ಕರುವರಕುಂಡು ಎಂಬಲ್ಲಿ ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡೂವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೃತನನ್ನು ಕೇರಳದ ಗಾಂಧಿ ನಗರ ನಿವಾಸಿ ಮುಜೀಬ್ ಮುಸ್ಲಿಯಾರ್ ಅವರ ಪುತ್ರ ನಫ್ಲಾನ್ ಎಂದು ಗುರುತಿಸಲಾಗಿದೆ. ಕಾರು ನಿಯಂತ್ರಣ ಕಳೆದುಕೊಂಡು ಕುಟುಂಬ ಪ್ರಯಾಣಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಮುಜೀಬ್ ಮುಸ್ಲಿಯಾರ್ ಮತ್ತು ಅವರ ಪತ್ನಿಯನ್ನು ಪೆರಿಂಥಲ್ಮಣ್ಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮದಿಂದಾಗಿ, ಮಗು ವಾಹನದಿಂದ ಜಾರಿ ಬಿದ್ದಿದೆ. ಮತ್ತು ಸಂಜೆ ವೇಳೆಗೆ ಮಗು ಮೃತಪಟ್ಟಿದೆ. ಕರುವಕ್ಕುಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.