ಪುತ್ತೂರು (www.vknews.in) : ಮೂಲತಃ ಪುತ್ತೂರಿನ ಪರ್ಲಡ್ಕ ಬಳಿಕ ಪುತ್ತೂರಿನ ಕೂರ್ನಡ್ಕ ನಿವಾಸಿಯಾಗಿದ್ದ ಹಾಗೂ ಈ ಹಿಂದೆ ಗಲ್ಫ್ ಉದ್ಯೋಗಿಯಾಗಿದ್ದ ಪ್ರಸ್ತುತ ಉಪ್ಪಳ ನಿವಾಸಿಯಾಗಿರುವ ಸೈಯ್ಯದ್ ವಹಾಬ್ ತಂಙಳ್ ಮಂಜೇಶ್ವರ ರವರ ಪತ್ನಿ ಸೈಯಿದತ್ ಅಫ್ಸಾಬಿ ರವರು ಶಿವಮೊಗ್ಗದಲ್ಲಿ ನಡೆದ ಕಾರು ಮತ್ತು ಲಾರಿ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗ ಆಸ್ಪತ್ರೆಯಲ್ಲಿ ನಿಧನರಾದರು. ಸೈಯ್ಯದ್ ವಹಾಬ್ ತಂಙಳ್ ರವರು ಗಾಯಗೊಂಡು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಮೃತರು ಸೈಯ್ಯದ್ ಕಬೀರ್ ತಂಙಳ್, ಸೈಯ್ಯದ್ ಸಿನಾನ್ ತಂಙಳ್, ಸೈಯ್ಯದ್ ಸಫ್ವಾನ್ ತಂಙಳ್ ಒಂದು ಹೆಣ್ಣು ಮಗಳ ತಾಯಿಯಾಗಿದ್ದಾರೆ. ಅಲ್ಲದೇ ಪುತ್ತೂರಿನ ಮರ್ಹೂಮ್ ಸೈಯ್ಯದ್ ಅಲಿ ತಂಙಳ್ (ಕರಾವಳಿ ತಂಙಳ್)ರವರ ಪತ್ನಿಯ ತಂಗಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.