ಅಮರಾವತಿ (www.vknews.in) : ಹತ್ತು ವರ್ಷದ ಬಾಲಕಿಯ ವಿಚಿತ್ರ ಅಭ್ಯಾಸವು ಆಕೆಯನ್ನು ಗಂಭೀರ ಆರೋಗ್ಯ ಸಮಸ್ಯೆಗೆ ನೂಕಿದ ಘಟನೆ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಡೆದಿದೆ. ಅಮರಾವತಿಯ ಹತ್ತು ವರ್ಷದ ಬಾಲಕಿ, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದಳು. ಈಕೆಯ ಆರೋಗ್ಯ ಪರೀಕ್ಷೆ ಮಾಡಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯ ಎಂದಾಗ ಪೋಷಕರೂ ದಂಗಾದರು. ಶಸ್ತ್ರಚಿಕಿತ್ಸೆ ನಡೆಸಿದಾಗ ವೈದ್ಯರಿಗೆ ಸಿಕ್ಕಿದ್ದು ಅರ್ಧ ಕೆ.ಜಿ. ತೂಕದ ಕೂದಲಿನ ಉಂಡೆ.
ಈ ಕುರಿತು ವೈದ್ಯರು ಬಾಲಕಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಶಸ್ತ್ರಚಿಕಿತ್ಸಕಿ ಡಾ. ಉಷಾ ಗಜಭಿಯೆ, ತನಗೆ ಕೆಲ ವರ್ಷಗಳಿಂದ ಕೂದಲು ತಿನ್ನುವ ಹವ್ಯಾಸವಿದೆ ಎಂದು ಆಕೆ ತಿಳಿಸಿದ್ದಾಳೆ. ಕಳೆದ ಆರು ತಿಂಗಳುಗಳಿಂದ ವಾಂತಿ ಹಾಗೂ ಹಸಿವಾಗದಿರುವುದು ಮತ್ತು ತೂಕ ಗಣನೀಯವಾಗಿ ಕುಸಿಯುತ್ತಿರುವ ಸಮಸ್ಯೆಯಿಂದ ಬಾಲಕಿ ಬಳಲುತ್ತಿದ್ದಳು. 20 ದಿನಗಳ ಹಿಂದೆ ಆಸ್ಪತ್ರೆಗೆ ಬಂದಿದ್ದರು.
ಈಗ ಶಸ್ತ್ರಚಿಕಿತ್ಸೆ ನಡೆಸಿ ಕೂದಲಿನ ಉಂಡೆಯನ್ನು ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಬಾಲಕಿಯ ಆರೋಗ್ಯ ಉತ್ತಮವಾಗಿದೆ. ಆಕೆ ಸರಿಯಾಗಿ ಆಹಾರ ಸೇವಿಸುತ್ತಿದ್ದಾಳೆ. ಶೀಘ್ರದಲ್ಲಿ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.