ಮಂಗಳೂರು (www.vknews.in) : ಆರ್.ಎಸ್.ಎಸ್ ಅಣತಿಯಂತೆ ಸುಳ್ಳು ಹೇಳಿ ಹೇಳಿ ರೋಸಿ ಹೋದ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್ ಗೆ ಧರ್ಮಸ್ಥಳ ಪ್ರಕರಣದಲ್ಲಿ ಸತ್ಯ ಹೇಳುವವರೆಲ್ಲರೂ ಮುಸ್ಲಿಮ್ ಆಗಿ ಕಾಣುತ್ತಾರೆ,ಇತ್ತೀಚೆಗೆ ಆರ್.ಅಶೋಕ್ ರವರು ಧರ್ಮಸ್ಥಳ ಪ್ರಕರಣದ ವಿಷಯದಲ್ಲಿ ಮುಸ್ಲಿಮ್ ವ್ಯಕ್ತಿ ಒಬ್ಬರು ಧರ್ಮಸ್ಥಳದ ಸ್ತ್ರೀ ದೌರ್ಜನ್ಯದ ಬಗ್ಗೆ ದೂರುತ್ತಾನೆ, ಇದರ ಹಿಂದೆ ಕೇರಳ ಸರಕಾರ ನಿಂತಿದೆ ಎಂಬಿತ್ಯಾದಿಯಾಗಿ ಅಸಂಭದ್ದ ಹೇಳಿಕೆ ನೀಡಿದ್ದಾರೆ.
ಆರ್.ಅಶೋಕ್, ಹಾಲಿ ಧರ್ಮಸ್ಥಳದ ಪ್ರಕರಣದ ಪರವಾಗಿ ವಕಾಲತ್ತು ವಹಿಸಿದಂತಹ ಮಾತು ಆಡಿದ್ದಾರೆ. ಪ್ರಸ್ತುತ ಧರ್ಮಸ್ಥಳದ ವಿಷಯದಲ್ಲಿ ನೂರಾರು ಮಹಿಳೆಯರ ಅತ್ಯಾಚಾರ, ಕೊಲೆ, ಸ್ತ್ರೀ ದೌರ್ಜನ್ಯದ ಆರೋಪ ವರದಿ ಆಗುತ್ತಿದ್ದಂತೆ, ಆರ್. ಅಶೋಕ ಆವರು ತನಿಖೆಯ ಪರವಾಗಿ ದ್ವನಿ ಎತ್ತಿ ಸರಕಾರದ ಪರವಾಗಿ ನಿಲ್ಲಬೇಕಿತ್ತು.ಆದರೆ ಆರ್.ಅಶೋಕ್ ನಡೆ ಅದರ ವಿರುದ್ಧ ಆಗಿದೆ. ಸೌಜನ್ಯ ಹತ್ಯೆ ಸಂದರ್ಭದಲ್ಲಿ ಅಧಿಕಾರದಲ್ಲಿ ಇದ್ದ ಆರ್. ಅಶೋಕ್, ಸೌಜನ್ಯ ತನಿಖೆ ವಿಫಲ ಆಗಲು ಪರೋಕ್ಷ ಕಾರಣ ಆಗಿರುವಾಗ, ಹಾಲಿ ತನಿಖೆಗೆ ಬೆಂಬಲ ಸೂಚಿಸುವುದು ಹೇಗೆ?, ಈ ತನಿಖೆಯ ಸಾರ್ವಜನಿಕ ಅಭಿಪ್ರಾಯವನ್ನು ವ್ಯತ್ಯಯ ಗೊಳಿಸುವ ಉದ್ದೇಶದಿಂದಲೇ ಆರ್.ಅಶೋಕ್ ಪ್ರಕರಣವನ್ನು ಮುಸ್ಲಿಮೀಕರಣಗೊಳಿಸಲು ಪ್ರಯತ್ನಿಸಿದ್ದಾರೆ.
ಆರ್.ಅಶೋಕ್ ರ ಮಾತಲ್ಲಿ ಒಂದಂತೂ ಸಾಬೀತುಗೊಂಡಿದೆ, ಅದೇನೆಂದರೆ, ಸತ್ಯಕ್ಕೂ ಮುಸ್ಲಿಮ್ ರಿಗೂ ಹತ್ತಿರದ ಸಂಬಂಧ ಇದೆ ಎಂದು, ಆರ್.ಅಶೋಕ್ ಇನ್ನಾದರೂ ಪ್ರಾಯಶ್ಚಿತ ಗೊಂಡು, ಆರ್.ಎಸ್.ಎಸ್ ನ ಸುಳ್ಳು ಪ್ರತಿಪಾದನೆ ತ್ಯಜಿಸಿ, ವಾಸ್ತವ ಸತ್ಯವನ್ನು ಜನತೆಗೆ ಪ್ರತಿಪಾದಿಸಲಿ. ಸತ್ಯ ಬಹಿರಂಗಕ್ಕೆ ಮುಸ್ಲಿಮ್ ಆದರೇನು? ಇನ್ಯಾರೆ ಅದರೆ ಏನು? , ಆರ್.ಅಶೋಕ್ ಅರಿಯಲಿ.
ಕೆ.ಅಶ್ರಫ್ ( ಮಾಜಿ ಮೇಯರ್) ಅಧ್ಯಕ್ಷರು,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.